ಫ್ರೆಂಡ್ಸ್ ಕರೀಲಿಲ್ಲ ಅಂತ ನಾನು ಬರಲ್ಲ ಅಂತ ಹಠ ಮಾಡಿದ ಪಾಕಿಸ್ತಾನ!
masthmagaa.com: ಅಮೆರಿಕದ ವಾಷಿಂಗ್ಟನ್ನಲ್ಲಿ ನಡೆಯುತ್ತಿರುವ ʻಡೆಮಾಕ್ರೆಸಿ ಸಮಿಟ್ʼಗೆ ಪಾಕಿಸ್ತಾನ ಗೈರಾಗಿದೆ. ಪಾಕಿಸ್ತಾನದ ದೋಸ್ತ್ಗಳಾದ ಚೀನಾ ಹಾಗೂ ಟರ್ಕಿಗೆ ಈ ಸಭೆಯಲ್ಲಿ ಭಾಗವಹಿಸಲು ಅಹ್ವಾನಿಸಿಲ್ಲ. ಹೀಗಾಗಿ ಈ ಸಭೆಯಿಂದ ಹಿಂದೆ ಸರಿದಿರೋದಾಗಿ ಪಾಕಿಸ್ತಾನ್ ಅಧಿಕಾರಿಗಳು ಹೇಳಿದ್ದಾರೆ. ನಮ್ಮನ್ನ ಈ ಸಮಿಟ್ಗೆ ಇನ್ವೈಟ್ ಮಾಡಿದಕ್ಕೆ ಧನ್ಯವಾದ. ಬೈಡೆನ್ ಆಡಳಿತದಲ್ಲಿ ಪಾಕಿಸ್ತಾನ ಮತ್ತು ಅಮೆರಿಕದ ಸಂಬಂಧದಲ್ಲಿ ಅಭಿವೃದ್ಧಿಯಾಗಿದೆ. ನಮ್ಮ ಸಂಬಂಧವನ್ನ ಇನ್ನಷ್ಟು ಬಲಗೊಳಿಸಲು ನಾವು ಬದ್ಧವಾಗಿದ್ದೀವಿ ಅಂತ ಪಾಕ್ ವಿದೇಶಾಂಗ ಅಧಿಕಾರಿಗಳು ತಿಳಿಸಿದ್ದಾರೆ. ಅಂದ್ಹಾಗೆ ಈ ಸಮಿಟ್ ನೆನ್ನೆ ಪ್ರಾರಂಭವಾಗಿದ್ದು, ಮೂರುದಿನಗಳ ಕಾಲ ವರ್ಚುವಲ್ ಆಗಿ ನಡೆಯಲಿದೆ. ಇನ್ನೊಂದ್ ಕಡೆ ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರ ಅಧಿಕಾರವನ್ನ ಮೊಟಕುಗೊಳಿಸುವ ಕಾನೂನನ್ನ ಜಾರಿಗೆ ತರದಿದ್ರೆ, ಇತಿಹಾಸ ನಮ್ಮನ್ನ ಕ್ಷಮಿಸುವುದಿಲ್ಲ ಅಂತ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಅಂದ್ಹಾಗೆ ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿನ ಚುನಾವಣೆಗಳ ಕುರಿತು ಫೆಬ್ರವರಿ 22ರಂದು ಅಲ್ಲಿನ ಮುಖ್ಯ ನ್ಯಾಯಮೂರ್ತಿ ಉಮರ್ ಅವ್ರು ಸ್ವಯಂಪ್ರೇರಿತವಾಗಿ ನಿರ್ಧಾರವನ್ನ ತೆಗೆದುಕೊಂಡಿದ್ರು. ಈ ನಿರ್ಧಾರವನ್ನ ಉಳಿದ ಜಡ್ಜ್ಗಳು ಆಕ್ಷೇಪಿಸಿದ್ರು. ಈ ಹಿನ್ನಲೆಯಲ್ಲಿ ಚೀಫ್ ಜಸ್ಟೀಸ್ರRead More →