ಗೂಡ್ಸ್​ ಗಾಡಿ ಓಡಿಸುತ್ತಿರುವ ಪಾಕ್ ಕ್ರಿಕೆಟಿಗ..! ಏನ್ ಅವಸ್ಥೆ ನೋಡಿ..

ಪಾಕಿಸ್ತಾನದ ರಾಷ್ಟ್ರಮಟ್ಟದ ಖ್ಯಾತ ಕ್ರಿಕೆಟಿಗರೊಬ್ಬರು ಪಿಕಪ್ ವಾಹನ ಓಡಿಸುತ್ತಿರುವ ವಿಡಿಯೋವೊಂದು ಫುಲ್ ವೈರಲ್ ಆಗಿದೆ. ಇದ್ರ ಬೆನ್ನಲ್ಲೇ ಪಾಕ್ ಕ್ರಿಕೆಟಿಗ ಮೊಹಮ್ಮದ್ ಹಫೀಜ್​ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಕೆಂಡಕಾರಿದ್ದಾರೆ. ಪಾಕ್ ಮೂಲಕದ ಪತ್ರಕರ್ತ ಸುಭಾನ್ ಎಂಬುವವರು ಪಾಕ್ ಕ್ರಿಕೆಟ್ ಆಟಗಾರ ನೋವು ತೋಡಿಕೊಂಡಿರೋ ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮೊಹಮ್ಮದ್ ಹಫೀಜ್​​, ತುಂಬಾ ಬೇಸರದ ವಿಚಾರ. ಇವರ ರೀತಿಯೇ ಇನ್ನೂ ಹಲವು ಆಟಗಾರರು ಬೇಸರದಲ್ಲಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೊಸ ಪದ್ಧತಿಯೊಂದನ್ನು ಅನುಸರಿಸುತ್ತಿದೆ. ಇದ್ರ ಪ್ರಕಾರ ಕೇವಲ 200 ಆಟಗಾರರ ಮೇಲೆ ಮಾತ್ರವೇ ಗಮನ ಹರಿಸಲಾಗುತ್ತೆ. ಇದರಿಂದಾಗಿ ಸಾವಿರಾರು ಕ್ರಿಕೆಟ್ ಆಟಗಾರರು ಮತ್ತು ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಕ್ರಿಕೆಟ್ ಆಟಗಾರ ಸುಭಾನ್​​, ನಾನು ಬಾಡಿಗೆಗಾಗಿ ಈ ಗೂಡ್ಸ್ ಗಾಡಿ ಓಡಿಸುತ್ತೇನೆ. ಒಮ್ಮೊಮ್ಮೆ ಬಾಡಿಗೆ ಆಗುತ್ತೆ. ಇನ್ನು ಕೆಲವೊಮ್ಮೆ ಬಾಡಿಗೆಯೇ ಆಗಲ್ಲ ಎಂದಿದ್ದಾರೆ. ಹಾಗಾದ್ರೆ ಕ್ರಿಕೆಟ್ ಕ್ಷೇತ್ರದ ಈ ನಿರುದ್ಯೋಗದ ಹೊಣೆ ಯಾರು ಹೊತ್ತುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ಧಾರೆ.

Contact Us for Advertisement

Leave a Reply