ಇರಾನ್‌ ಹಾಗೂ ಪಾಕ್‌ ಪ್ರತಿಭಟನೆಗಳಲ್ಲಿ ಭಾಗವಹಿಸಿದಂತೆ ಅಫ್ಘನ್ನರಿಗೆ ಆದೇಶ!

masthmagaa.com:

ಇರಾನ್‌ನಲ್ಲಿ ನಡೀತಾಯಿರೊ ಹಿಜಬ್‌ ವಿರೋಧಿ ಪ್ರತಿಭಟನೆಗಳಿಂದ ಹಾಗೂ ಪಾಕಿಸ್ತಾನದ ರಾಜಕೀಯ ಪ್ರತಿಭಟನೆಗಳಿಂದ ದೂರವಿರುವಂತೆ ಅಫ್ಘಾನ್‌ ನಿರಾಶ್ರಿತರಿಗೆ ತಾಲಿಬಾನ್‌ ಆಡಳಿತ ಆದೇಶ ನೀಡಿದೆ. ಉಭಯ ದೇಶಗಳಲ್ಲಿ ಅವರ ಸ್ಥಳೀಯ ಸಮಸ್ಯೆಗಳಿಂದ ಪ್ರತಿಭಟನೆಗಳು ಆಗ್ತಿವೆ. ಅದರಲ್ಲಿ ಭಾಗಿಯಾಗಿ ನಿಮ್ಮ ಲೈಫ್‌ನ್ನ ಹಾಳ್‌ ಮಾಡ್ಕೋಬೇಡಿ ಅಂತ ತಾಲಿಬಾನ್‌ ಆಡಳಿತದ ಮಿನಿಸ್ಟರ್‌ ಅಬ್ದುಲ್‌ ರೆಹಮಾನ್‌ ರಶೀದ್‌ ಹೇಳಿದ್ದಾರೆ. ಅಂದ್ಹಾಗೆ ಕೆಲ ದಿನಗಳ ಹಿಂದೆ ಪ್ರತಿಭಟನೆಗಳಲ್ಲಿ 40 ವಿದೇಶಿ ಪ್ರಜೆಗಳನ್ನ ಬಂಧಿಸಲಾಗಿದೆ ಅಂತ ಇರಾನ್‌ ಹೇಳಿತ್ತು. ಆದರೆ ಯಾವ ದೇಶದವ್ರು ಅಂತ ಮಾಹಿತಿ ನೀಡಿರಲಿಲ್ಲ. ಇದರ ಹಿನ್ನಲೆಯಲ್ಲಿ ತಾಲಿಬಾನ್‌ ಈ ಆದೇಶ ನೀಡಿದೆ.

-masthmagaa.com

Contact Us for Advertisement

Leave a Reply