ತಾಲಿಬಾನ್ ಜೊತೆ ಮೀಟಿಂಗ್ ಬಳಿಕ ಅಮೆರಿಕ ಹೇಳಿದ್ದೇನು..?

masthmagaa.com:

ಅಫ್ಘಾನಿಸ್ತಾನದಲ್ಲಿ ಟೇಕೋವರ್ ಆದ ಬಳಿಕ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ ಮತ್ತು ಅಮೆರಿಕ ನಡುವೆ ಕತಾರ್​ನ ದೋಹಾದಲ್ಲಿ ಮಾತುಕತೆ ನಡೆದಿದೆ. ಈ ಸಭೆ ನಿನ್ನೆ ಮತ್ತು ಮೊನ್ನೆ ನಡೆದ ಸಭೆಯಲ್ಲಿ ಭದ್ರತೆ, ಭಯೋತ್ಪಾದನೆ ಮತ್ತು ಅಮೆರಿಕನ್ನರಿಗೆ ಸುರಕ್ಷಿತವಾಗಿ ಹೊರಬರಲು ಅವಕಾಶ ನೀಡೋದು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕ, ಸಭೆ ನೇರಾನೇರ ಮತ್ತು ಪ್ರೊಫೆಷನಲ್ ಆಗಿತ್ತು ಅಂತ ಹೇಳಿದೆ. ಜೊತೆಗೆ ಬರೀ ಮಾತುಗಳಿಂದ ಅಲ್ಲ.. ನಿಮ್ಮ ಕೆಲಸದ ಆಧಾರದ ಮೇಲೆ ನಿಮ್ಮನ್ನು ಜಡ್ಜ್ ಮಾಡ್ತೀವಿ ಅಂತ ಕೂಡ ತಿಳಿಸಿದ್ದೀವಿ ಅಂತ ಅಮೆರಿಕ ಹೇಳಿದೆ. ಆದ್ರೆ ಉಭಯದೇಶಗಳ ನಡುವೆ ಯಾವುದಾದ್ರೂ ಒಪ್ಪಂದ ಆಗಿದ್ಯಾ ಏನ್ ಕಥೆ ಅನ್ನೋ ಬಗ್ಗೆ ಮಾಹಿತಿ ನೀಡಿಲ್ಲ.

-masthmagaa.com

Contact Us for Advertisement

Leave a Reply