ಈಕೆ ವಿಶ್ವದ ಅತಿ ಎತ್ತರದ ಮಹಿಳೆ! ಎಷ್ಟು ಎತ್ತರ ಇದ್ದಾರೆ ಗೊತ್ತಾ?

masthmagaa.com:

ರುಮೇಸಾ ಗೆಲ್ಗಿ ವಿಶ್ವದ ಅತಿ ಎತ್ತರವಿರೋ ಜೀವಂತ ಮಹಿಳೆ ಅನ್ನೋ ಹೆಸರಿಗೆ ಪಾತ್ರರಾಗಿದ್ದಾರೆ. ಟರ್ಕಿ ಮೂಲದ 24 ವರ್ಷದ ಇವರು 7 ಅಡಿ 07 ಇಂಚು ಉದ್ದ ಇದ್ದಾರೆ. ಈ ಮೂಲಕ ಎರಡನೇ ಬಾರಿಗೆ ಗಿನ್ನಿಸ್ ವರ್ಲ್ಡ್​ ರೆಕಾರ್ಡ್ ಮುರಿದಿದ್ದಾರೆ. 2014ಲ್ಲಿ ತಮ್ಮ 18ನೇ ವಯಸ್ಸಲ್ಲಿ ವಿಶ್ವದ ಅತಿ ಎತ್ತರದ ಜೀವಂತ ಟೀನೇಜರ್ ಅನ್ನೋ ದಾಖಲೆ ಬರೆದಿದ್ರು. ಆದ್ರೆ ರುಮೇಸಾ ಗೆಲ್ಗಿ ನ್ಯಾಚುರಲ್ ಆಗಿ ಇಷ್ಟು ಹೈಟ್ ಇಲ್ಲ.. ಬದಲಿಗೆ ಇವರು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ವೀವರ್ ಸಿಂಡ್ರೋಮ್ ಅಂತ ಅದ್ರ ಹೆಸರು. ಇದ್ರಿಂದಾಗಿ ಎತ್ತರ ತುಂಬಾ ಜಾಸ್ತಿಯಾಗಿದ್ದಾರೆ. ಇವರಿಗೆ ನಡೆದಾಡಲು ಕಷ್ಟವಾಗುತ್ತೆ. ಹೀಗಾಗಿ ಹೆಚ್ಚಾಗಿ ವ್ಹೀಲ್​ಚೇರ್​ನಲ್ಲೇ ಓಡಾಡ್ತಾರೆ. ಆದ್ರೂ ಸ್ವಲ್ಪ ದೂರದವರೆಗೆ ವಾಕರ್ ಸಹಾಯದೊಂದಿಗೆ ಸ್ವಲ್ಪ ದೂರ ನಡೀತಾರೆ ಕೂಡ..

-masthmagaa.com

Contact Us for Advertisement

Leave a Reply