ಕಮಲ್ ಹಾಸನ್ ಈ ಸಲ ಸ್ಪರ್ಧಿಸೋ ಕ್ಷೇತ್ರ ಯಾವುದು..?

masthmagaa.com:

ಚೆನ್ನೈ: ಮಕ್ಕಳ್ ನೀದಿ ಮಯಂ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಇಂದು 2ನೇ ಹಂತದ ಪ್ರಚಾರಕ್ಕೆ ಧುಮುಕಿದ್ದಾರೆ. ಚೆನ್ನೈನ ಅಲಂದೂರಿನಲ್ಲಿ ಪ್ರಚಾರ ಆರಂಭಿಸಿದ್ದು, ಇದೇ ಕ್ಷೇತ್ರದಿಂದ ಅವರು ಕಣಕ್ಕಿಳಿಯೋ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಲು 2 ಕಾರಣಗಳಿವೆ.. ಒಂದು 1967ರಿಂದ 76ರವರೆಗೆ ಹತ್ತತ್ರ 10 ವರ್ಷ ಈ ಕ್ಷೇತ್ರ ತಮಿಳುನಾಡು ಮಾಜಿ ಸಿಎಂ ಎಂಜಿ ರಾಮಚಂದ್ರನ್ ಅವರ ಕ್ಷೇತ್ರವಾಗಿತ್ತು. ಇದು ಒಂದು ಕಾರಣವಾದ್ರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಮಲ್ ಹಾಸನ್ ಪಕ್ಷಕ್ಕೆ ನಗರ ಪ್ರದೇಶದಲ್ಲಿ ಶೇ.10ರಷ್ಟು ಮತ ಬಂದಿತ್ತು. ಈ ಎರಡು ಕಾರಣಗಳಿಂದಾಗಿ ಕಮಲ್ ಹಾಸನ್ ಈ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿದ್ದಾರೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply