ಶರದ್ ಗೆ ಇಡಿ ಬಲೆ..! ರಾಹುಲ್ ಗಾಂಧಿ ಕೆಂಡಾಮಂಡಲ..!

ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಹಗರಣ ಸಂಬಂಧ ಇವತ್ತು ಎನ್‍ಸಿಪಿ ನಾಯಕ ಶರದ್ ಪವಾರ್ ಜಾರಿ ನಿರ್ದೇಶನಾಲಯ ಮುಂದೆ ಹಾಜರಾಗುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಕೆಂಡಕಾರಿದ್ದಾರೆ. ಸೇಡಿನ ರಾಜಕೀಯ ಮಾಡ್ತಿರುವ ಕೇಂದ್ರದ ಟಾರ್ಗೆಟ್‍ಗೆ ಒಳಗಾಗುತ್ತಿರುವ ಹೊಸ ವಿಪಕ್ಷ ನಾಯಕ ಶರದ್ ಪವಾರ್. ಮಹಾರಾಷ್ಟ್ರ ಚುನಾವಣೆಗೆ ಒಂದೇ ತಿಂಗಳು ಬಾಕಿ ಇರೋವಾಗ ಕೇಂದ್ರದ ಈ ನಡೆ ರಾಜಕೀಯ ಸಮಯ ಸಾಧಕತೆಯನ್ನು ತೋರಿಸುತ್ತೆ ಅಂತ ಟೀಕಿಸಿದ್ದಾರೆ.

ಇನ್ನು ಇಡಿ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿದ್ದ ಶರದ್ ಪವಾರ್, ಚುನಾವಣೆಯಲ್ಲಿ ಬ್ಯುಸಿಯಾಗೋ ಮುನ್ನ ಇಡಿ ವಿಚಾರಣೆಯನ್ನು ಎದುರಿಸಿ ಬಿಡುತ್ತೇನೆ. ನನಗೆ ಯಾವುದೇ ಭಯವಿಲ್ಲ. ದೆಹಲಿ ಸಿಂಹಾಸನದ ಮುಂದೆ ತಲೆಬಾಗೋದನ್ನು ಮಹಾರಾಷ್ಟ್ರ ಇತಿಹಾಸ ನಮಗೆ ಕಲಿಸಿಕೊಟ್ಟಿಲ್ಲ ಎಂದು ಹೇಳಿದ್ದರು.

Contact Us for Advertisement

Leave a Reply