ಅತಿದೊಡ್ಡ ನೀರಿನ ಮಾರಾಟ ಕಂಪನಿ ಬಿಸ್ಲೆರಿ ಖರೀದಿ ಮಾಡಲಿದ್ಯಾ ಟಾಟಾ ಗ್ರೂಪ್‌?

masthmagaa.com:

ದೇಶದ ಅತಿ ದೊಡ್ಡ ಕುಡಿಯುವ ನೀರಿನ ಮಾರಾಟ ಕಂಪನಿ ʻಬಿಸ್ಲೆರಿʼಯನ್ನ ಟಾಟಾ ಸಮೂಹ ಖರೀದಿ ಮಾಡಲಿದೆ ಅಂತ ವರದಿಯಾಗಿದೆ. ಸುಮಾರು 7 ಸಾವಿರ ಕೋಟಿಗೆ ಡೀಲ್‌ ನಡೆಯೋ ಸಾಧ್ಯತೆ ಇದೆ ಎನ್ನಲಾಗಿದೆ. ಬಿಸ್ಲೆರಿ ಮಾಲೀಕ ರಮೇಶ್‌ ಚೌಹಾಣ್‌ರ ಆರೋಗ್ಯ ಸರಿ ಇಲ್ಲದ ಕಾರಣ ಅವ್ರು ಕಂಪನಿಯನ್ನ ಮಾರೋಕೆ ಮುಂದಾಗಿದ್ದಾರೆ. ಟಾಟಾ ಕಂಪನಿ ಸೇರಿದಂತೆ ಹಲವು ಖರೀದಿದಾರರ ಜೊತೆ ಮಾತುಕತೆ ನಡೆಸಲಾಗಿದೆ. ಆದ್ರೆ 7 ಸಾವಿರಕ್ಕೆ ಡೀಲ್‌ ಆಗುತ್ತೆ ಅನ್ನೋದು ಸುಳ್ಳು ಈ ಬಗ್ಗೆ ಇನ್ನು ಫೈನಲೈಸ್‌ ಆಗಿಲ್ಲ, ಮಾತುಕತೆ ನಡೀತಾ ಇದೆ ಅಂತ ರಮೇಶ್‌ ಸ್ಪಷ್ಟನೆ ನೀಡಿದ್ದಾರೆ. ಅಂದ್ಹಾಗೆ ಈಗಾಗಲೇ ಟಾಟಾ ಗ್ರೂಪ್‌ ಹಿಮಾಲಯನ್‌ ಬ್ರಾಂಡ್‌ ಅಡಿಯಲ್ಲಿ ಮಿನರಲ್‌ ವಾಟರ್‌ನ್ನ ಮಾರಾಟ ಮಾಡ್ತಿದೆ. ಈ ಒಪ್ಪಂದ ಫೈನಲೈಸ್‌ ಆದ್ರೆ ವಾಟರ್‌ ಬಾಟಲ್‌ ಉದ್ಯಮದಲ್ಲಿ ಟಾಟಾ ಗ್ರೂಪ್‌ ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply