ದಕ್ಷಿಣ ಭಾರತದಲ್ಲೂ ಖಾಸಗಿ ರೈಲು ಸೇವೆ: ಸುರೇಶ್ ಅಂಗಡಿ

ದಕ್ಷಿಣ ಭಾರತದಲ್ಲೂ ಖಾಸಗಿ ರೈಲ್ವೆ ಸೇವೆ ಆರಂಭಿಸೋದಾಗಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ. ದೇಶದ ಮೊದಲ ತೇಜಸ್ ಎಕ್ಸ್‍ಪ್ರೆಸ್ ರೈಲು ಲಕ್ನೋ ಮತ್ತು ದೆಹಲಿ ನಡುವೆ ಸಂಚಾರ ಆರಂಭಿಸಿದೆ. ಇದೀಗ ದಕ್ಷಿಣ ಭಾರತದಲ್ಲೂ ತೇಜಸ್ ಎಕ್ಸ್‍ಪ್ರೆಸ್ ರೈಲು ಸೇವೆ ಆರಂಭಿಸಲಿದ್ದೇವೆ. ಆಸಕ್ತಿ ಇರುವ ಹೂಡಿಕೆದಾರರು ಮುಂದೆ ಬರಬಹುದು ಎಂದು ಸುರೇಶ್ ಅಂಗಡಿ ತಿಳಿಸಿದ್ದಾರೆ.

ಕಳೆದ ವಾರ ದೆಹಲಿ ಮತ್ತು ಲಕ್ನೋ ನಡುವೆ ಮೊದಲ ಖಾಸಗಿ ಎಕ್ಸ್‍ಪ್ರೆಸ್ ರೈಲು ಸಂಚಾರ ಆರಂಭವಾಗಿದೆ. ಇದರಲ್ಲಿ ಎಸಿ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳಿವೆ. ಇನ್ನು ಈ ರೈಲು ಒಂದು ಗಂಟೆ ತಡವಾದ್ರೆ 100 ಮತ್ತು 2 ಗಂಟೆ ತಡವಾದ್ರೆ 250 ರೂಪಾಯಿ ಪರಿಹಾರವಾಗಿ ನೀಡೋದಾಗಿ ರೈಲ್ವೆ ಇಲಾಖೆ ಘೋಷಿಸಿತ್ತು.

Contact Us for Advertisement

Leave a Reply