ಟಂಟಂಗೆ ಅಡ್ಡಹಾಕಿದ್ರು ಪೊಲೀಸರು..! ಹೋಯ್ತು 4 ಜೀವ..!

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದ ಟಂಟಂ ವಾಹನ ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಟಂಟಂನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ವಿಜಯಪುರದ ಕೊಲ್ಹಾರದಲ್ಲಿ ಈ ಘಟನೆ ನಡೆದಿದೆ. ಬಾಗಲಕೋಟೆ-ವಿಜಯಪುರ ಹೈವೇಯಲ್ಲಿ ಸಾಗುತ್ತಿದ್ದ ಟಂಟಂ ವಾಹನವನ್ನು ಪೊಲೀಸರು ಅಡ್ಡಹಾಕಿದ್ದರು. ಆದ್ರೆ ವಾಹನ ಚಾಲಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಟಂಟಂ ವಾಹನ ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿ ಹೊಡೆದಿದೆ. ಪೊಲೀಸರು ಅವರ ಕರ್ತವ್ಯ ನಿರ್ವಹಿಸುತ್ತಿದ್ದರಾದರೂ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಪೊಲೀಸರು ಟಂಟಂ ಅಡ್ಡ ಹಾಕಿದ್ದೇ ಈ ದುರ್ಘಟನೆಗೆ ಕಾರಣ ಅಂತ ರೊಚ್ಚಿಗೆದ್ದ ಸ್ಥಳೀಯರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಪಿಎಸ್‍ಐ ವಾಹನಕ್ಕೆ ಬೆಂಕಿ ಕೂಡ ಹಚ್ಚಿದ್ದಾರೆ.

Contact Us for Advertisement

Leave a Reply