ಸಾಲು ಸಾಲು ಎಡವಟ್ಟು: ಪಿಯು ಪಠ್ಯಪರಿಷ್ಕರಣೆಯನ್ನೇ ಕೈ ಬಿಟ್ಟ ಸರ್ಕಾರ..!

masthmagaa.com:

ಪಠ್ಯಪುಸ್ತಕ ಪರಿಷ್ಕರಣಾ ವಿಚಾರವಾಗಿ ಒಂದರ ಮೇಲೊಂದರಂತೆ ಭಾರಿ ಟೀಕೆ ಎದುರುಸ್ತಿರೋ ರಾಜ್ಯ ಸರ್ಕಾರ ಈಗ ಪಿಯು ಪಠ್ಯ ಪರಿಷ್ಕರಣೆಯನ್ನೇ ಕೈ ಬಿಟ್ಟಿದೆ. ಈ ಬಗ್ಗೆ ಮಾತನಾಡಿರೋ ಶಿಕ್ಷಣ ಸಚಿವ BC ನಾಗೇಶ್‌, ಪದವಿ ಪೂರ್ವ ಮಕ್ಕಳ ಇತಿಹಾಸ ವಿಷಯದ ಒಂದು ಪಠ್ಯಕ್ಕೆ ಸಂಬಂಧಪಟ್ಟಂತೆ ಪಠ್ಯ ಪರಿಷ್ಕರಣೆ ಮಾಡುವಂತೆ ನಾವು ಇದೇ ಸಮಿತಿ ಅಂದ್ರೆ ರೋಹಿತ್‌ ಚಕ್ರತೀರ್ಥ ಸಮಿತಿಗೆ ಹೇಳಿದ್ವಿ. ಆದ್ರೆ ಈಗ ನಾವು ಅದನ್ನ ಕೈ ಬಿಟ್ಟಿದ್ದು ಯಾವುದೇ ಬದಲಾವಣೆ ಮಾಡೋದಿಲ್ಲ. ಪಠ್ಯಪರಿಷ್ಕರಣೆ ವಿಚಾರವಾಗಿ ಸಿಎಂರ ಜೊತೆಗೆ ಚರ್ಚೆ ಮಾಡಿದ್ದೀವಿ. ಅವರೂ ಇದನ್ನೇ ಹೇಳಿದ್ದಾರೆ.
ಈಗಾಗಲೇ ಪರಿಷ್ಕರಣೆಯಾಗಿರೋದನ್ನ ನಾವು ಜನರ ಮುಂದೆ ಇಡ್ತೀವಿ. ಅವರೇ ಡಿಸೈಡ್‌ ಮಾಡ್ತಾರೆ. ಯಾವುದೇ ತಪ್ಪುಗಳಿದ್ದಲ್ಲಿ ನಾವು ಸರಿಪಡಿಸಿಕೊಳ್ತೀವಿ ಅಂತ ಹೇಳಿದ್ದಾರೆ. ಇನ್ನು ಇತ್ತ ಪಿಯು ಪರಿಷ್ಕರಣೆಯಿಂದ ಕೈ ಬಿಟ್ಟ ವಿಚಾರವಾಗಿ ರೋಹಿತ್‌ ಚಕ್ರ ಕೂಡ ಪ್ರತಿಕ್ರಿಯಿಸಿದ್ದು ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಅವರು ಪರಿಷ್ಕರಣೆ ಬೇಕು ಅಂದ್ರೆ ನಾವು ವರದಿ ನೀಡ್ತೀವಿ. ಬೇಡ ಹಾಗೆ ಮುಂದುವರೀಲಿ ಅಂದ್ರೆ ನಾವೂ ಕೂಡ ಕೈ ಬಿಡ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply