masthmagaa.com:
ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್ ಮತ್ತು ಹೆಚ್.ಎಸ್. ಪ್ರಣೋಯ್ಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಸೈನಾ, ಪ್ರಣೋಯ್ ಮತ್ತು ಪರುಪಳ್ಳಿ ಕಶ್ಯಪ್ ‘ಯೋನೆಕ್ಸ್ ಥೈಲ್ಯಾಂಡ್ ಓಪನ್’ ಟೂರ್ನಮೆಂಟ್ನಿಂದ ಹಿಂದೆ ಸರಿದಿದ್ದಾರೆ ಅಂತ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (BAI) ತಿಳಿಸಿದೆ. ಸೈನಾ ನೆಹ್ವಾಲ್ ಮತ್ತು ಪ್ರಣೋಯ್ಗೆ ಕೊರೋನಾ ಪಾಸಿಟಿವ್ ಬಂದಿದ್ರೆ, ಪರುಪಳ್ಳಿ ಕಶ್ಯಪ್ ಸೋಂಕಿತರೊಬ್ಬರ ಸಂಪರ್ಕಕ್ಕೆ ಬಂದಿದ್ದಾರೆ.
ತಮಗೆ ಕೊರೋನಾ ಪಾಸಿಟಿವ್ ಬಂದಿರೋದಕ್ಕೆ ಸೈನಾ ನೆಹ್ವಾಲ್ ಅನುಮಾನ ವ್ಯಕ್ತಪಡಿಸಿದ್ದಾರೆ. ‘ನನಗಿನ್ನೂ ಕೊರೋನಾ ಪರೀಕ್ಷೆಯ ವರದಿ ಸಿಕ್ಕಿಲ್ಲ. ರೂಲ್ಸ್ ಪ್ರಕಾರ ಪರೀಕ್ಷೆ ನಡೆಸಿದ 5 ಗಂಟೆಯಲ್ಲಿ ರಿಪೋರ್ಟ್ ಬರಬೇಕು. ನನಗೆ ನಿನ್ನೆ ಪರೀಕ್ಷೆ ನಡೆಸಿದ್ರೂ ವರದಿ ಬಂದಿಲ್ಲ. ಆದ್ರೆ ಇವತ್ತು ಬೆಳಗ್ಗೆ ವಾರ್ಮ್ ಅಪ್ ಮಾಡುವಾಗ ನಿಮಗೆ ಪಾಸಿಟಿವ್ ಬಂದಿದೆ, ನೀವು ಬ್ಯಾಂಕಾಕ್ ಆಸ್ಪತ್ರೆಗೆ ದಾಖಲಾಗಬೇಕು ಅಂತ ಹೇಳಿದ್ದಾರೆ. ಇದರಿಂದ ನನಗೆ ಕನ್ಫ್ಯೂಸ್ ಆಗ್ತಿದೆ’ ಅಂತ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದಾರೆ.
-masthmagaa.com
Contact Us for Advertisement