ಹಾವುಗಳಿದ್ದ ಬ್ಯಾಗ್ ಕದ್ದೊಯ್ದ ಕಳ್ಳರು..!

ಹಾವುಗಳಿದ್ದ ಬ್ಯಾಗನ್ನು ಕಳ್ಳರು ಕದ್ದೊಯ್ದಿರುವ ಘಟನೆ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‍ನಲ್ಲಿ ನಡೆದಿದೆ. ಬ್ರಿಯಾನ್ ಗಂಡಿ ಎಂಬುವವರು ಹೆಬ್ಬಾವುಗಳನ್ನು ಸಾಕುತ್ತಾರೆ. ಕಳೆದ ಶನಿವಾರ ಅವುಗಳನ್ನು ತಂದು ಪಾರ್ಕಿಂಗ್ ಲಾಟ್‍ನಲ್ಲಿ ಕೆಳಗೆ ಇಟ್ಟಿದ್ದರು. ತಮ್ಮ ಕಾರಿನಿಂದ ಕೇವಲ 15 ಅಡಿ ದೂರದಲ್ಲಿ ಇಟ್ಟಿದ್ದರು. ಈ ವೇಳೆ ಅಲ್ಲಿಗೆ ಬಂದ ಕಳ್ಳರು ಬ್ಯಾಗ್ ಎತ್ತಿಕೊಂಡು ಓಡಿಹೋಗಿದ್ದಾರೆ. ಅದರಲ್ಲಿ ಒಟ್ಟು 4 ಹೆಬ್ಬಾವು ಮತ್ತು ಒಂದು ಹಲ್ಲಿ ಕೂಡ ಇತ್ತು. ಇವುಗಳ ಒಟ್ಟು ಬೆಲೆ 5 ಸಾವಿರ ಡಾಲರ್ ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಫೇಸ್‍ಬುಕ್‍ನಲ್ಲಿ ವಿಡಿಯೋ ಪೋಸ್ಟ್ ಮಾಡಿರೋ ಬ್ರಿಯಾನ್, ಅವುಗಳು ವಿಷಕಾರಿ ಹಾವುಗಳಲ್ಲ. ಅವುಗಳಿಂದ ಯಾರಿಗೂ ಯಾವುದೇ ತೊಂದರೆಯಿಲ್ಲ. ಯಾವುದೇ ಕಾರಣಕ್ಕೂ ಅವುಗಳನ್ನು ಸಾಯಿಸಬೇಡಿ ಎಂದು ಹೇಳಿದ್ದಾರೆ. ಅಲ್ಲದೆ ಕಂಪ್ಲೆಂಟ್ ನೀಡಲು ಇಷ್ಟವಿಲ್ಲ. ನನಗೆ ಹಾವುಗಳು ವಾಪಸ್ ಬೇಕಿದೆ. ಅವುಗಳು ನನ್ನ ಮಕ್ಕಳಿದ್ದಂತೆ ಎಂದು ಹೇಳಿದ್ದಾರೆ. ಅಲ್ಲದೆ ದಯವಿಟ್ಟು ವಾಪಸ್ ನೀಡಿ ಎಂದು ಮೊಬೈಲ್ ನಂಬರ್ ಕೂಡ ಹೇಳಿಕೊಂಡಿದ್ದಾರೆ.

Contact Us for Advertisement

Leave a Reply