ತೂಕ ಇಳಿಸ್ಕೊಂಡ್ರೆ 10 ಲಕ್ಷ, ತನ್ನ ಉದ್ಯೋಗಿಗಳಿಗೆ ಫಿಟ್‌ನೆಸ್‌ ಚಾಲೆಂಜ್‌ ನೀಡಿದ ಸಿಇಓ!

masthmagaa.com:

ಈ ಕೋವಿಡ್‌ ಪ್ಯಾಂಡೆಮಿಕ್‌ ಬಂದು ಕಾರ್ಪೋರೇಟ್‌ ಕಂಪನಿಗಳೆಲ್ಲ ವರ್ಕ್‌ ಪ್ರಂ ಹೋಮ್‌ ಸಂಸ್ಕೃತಿಗೆ ಶಿಫ್ಟ್‌ ಆಗಿವೆ. ಇದ್ರಿಂದ ಉದ್ಯೋಗಿಗಳ ತೂಕ ಹೆಚ್ತಿದೆ ಅನ್ನೋ ವರದಿಗಳು ಬರ್ತಿವೆ. ಇದ್ರ ನಡುವೆ ಈಗ ಸಿಇಓ ಒಬ್ರು ತಮ್ಮ ಕಂಪನಿಯ ಉದ್ಯೋಗಿಗಳ ತೂಕ ಕಡಿಮೆ ಮಾಡಲು ಏನ್‌ ಮಾಡಿದಾರೆ ಗೊತ್ತಾ? ʻಫಿಟ್‌ನೆಸ್‌ ಚಾಲೆಂಜ್‌ʼ ನೀಡಿದ್ದಾರೆ. ಹೌದು ಆನ್‌ಲೈನ್‌ ಷೇರ್‌ ಬ್ರೋಕರೇಜ್‌ ಕಂಪನಿ ʻಜೀರೋಧಾʼನ ಸಿಇಓ ನಿತಿನ್‌ ಕುಮಾರ್‌ ಕೆಲವು ಫಿಟ್‌ನೆಸ್‌ ಚಾಲೆಂಜ್‌ಗಳನ್ನ ನೀಡಿದ್ದಾರೆ. ಅದ್ರಲ್ಲಿ ತೂಕವನ್ನ ಕಡಿಮೆ ಮಾಡ್ಕೋಳೋದು ಕೂಡ ಒಂದು. ಮುಂದಿನ ವರ್ಷಗಳಲ್ಲಿ ಈ ಫಿಟ್‌ನೆಸ್‌ ಚಾಲೆಂಜ್‌ನ 90% ಟಾರ್ಗೆಟ್‌ ರೀಚ್‌ ಮಾಡಿದ ಉದ್ಯೋಗಿಗಳಿಗೆ ಒಂದು ತಿಂಗಳ ಸಂಬಳವನ್ನ ಬೋನಸ್‌ ಆಗಿ ನೀಡುವದಾಗಿ ಹೇಳಿದ್ದಾರೆ. ಜೊತೆಗೆ ಅದ್ರಲ್ಲೊಬ್ಬ ಲಕ್ಕಿ ಉದ್ಯೋಗಿಗೆ 10 ಲಕ್ಷ ನೀಡೋದಾಗಿ ಕೂಡ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply