ʻಇದು ಬಿಟಿಎಂ, ಇಲ್ಲಿ ಮಲಯಾಳಿಗಳೇ ಜಾಸ್ತಿ..ಏನ್‌ ಬೇಕಾದ್ರೂ ಮಾಡ್ತೀವಿʼ ಎಂದ್ರಂತೆ ಕೇರಳದ ಯುವತಿ!

masthmagaa.com:

ಸಿಲಿಕಾನ್‌ ಸಿಟಿ ಬೆಂಗಳೂರು ಜಾಗತಿಕ ನಗರವಾಗಿ ಬೆಳೀತೀರೋದ್ರ ಜೊತೆಗೆ ಇಲ್ಲಿ ಪರಭಾಷಿಕರೇ ಹೆಚ್ಚಾಗಿ, ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ ಅನ್ನೋ ಆರೋಪ ಇದೆ. ಇದೀಗ ಬೆಂಗಳೂರಿನ ಪಿಜಿಯೊಂದರ ರೂಮ್​​ನಲ್ಲಿ ಇಂಗ್ಲೀಷ್ ಬಳಸದೇ, ಕನ್ನಡ ಮಾತಾಡಿದ್ದಕ್ಕೆ ಕೇರಳ ಮೂಲದ ಯುವತಿಯೊಬ್ರು ಕನ್ನಡದ ವೈದ್ಯೆಯೊಬ್ರ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಸೃಷ್ಟಿ ಅನ್ನೋ ಯುವತಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಆರೋಪ ಮಾಡಿದ್ದಾರೆ. ಜೊತೆಗೆ ಕನ್ನಡವನ್ನ ಕುರಿತು ತುಂಬಾ ಅಶ್ಲೀಲ, ಅಸಭ್ಯ, ಹಾಗೂ ಅಸಹ್ಯ ಪದಗಳನ್ನ ಬಳಸಿದ್ದಾರೆ. ಜೊತೆಗೆ ಇದು ಬಿಟಿಎಂ.. ಇಲ್ಲಿ ಮಲಯಾಳಿಗಳೇ ಜಾಸ್ತಿ ಇರ್ತಾರೆ.. ಏನ್‌ ಬೇಕಾದ್ರೂ ಮಾಡೋಕೆ ನಾನ್‌ ಯೋಚನೆ ಮಾಡೋಲ್ಲ ಅಂತ ಬೆದರಿಕೆ ಹಾಕಿದ್ದಾರೆ ಅಂತ ಸಂತ್ರಸ್ತೆ ಆರೋಪ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply