ಪೊಲೀಸ್‌ ಠಾಣೆಯಲ್ಲಿ ಕಡತಗಳನ್ನ ರಕ್ಷಿಸೋಕೆ ಬೆಕ್ಕು ಸಾಕಿದ ಸಿಬ್ಬಂದಿ? ಎಲ್ಲಿ

masthmagaa.com:

ಕಛೇರಿಗಳಲ್ಲಿ ದಾಖಲೆಗಳನ್ನ ಸಂಗ್ರಹ ಮಾಡೋದಕ್ಕೆ ಎಲ್ಲಕ್ಕಿಂತ ದೊಡ್ಡ ಶತ್ರು ಅಂದ್ರೆ ಅದು ಇಲಿ. ಸಿಕ್ಕಸಿಕ್ಕ ದಾಖಲೆಗಳನ್ನೆಲ್ಲಾ ಕಡಿದು ತಿಂದು ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುತ್ತವೆ. ಇಂತಹ ಇಲಿಯ ಕಾಟದಿಂದ ತಪ್ಪಿಸಿಕೊಳ್ಳೋದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್‌ ಠಾಣೆಯೊಂದು ಬೀರನ ಕಾವಲು ಇಟ್ಟಿದೆ. ಈ ಬೀರಾ ಯಾರು ಅಂದ್ರೆ ಸ್ಕ್ರೀನ್‌ ಮೇಲೆ ಕಾಣಿಸ್ತಿದೆಯೆಲ್ಲಾ ಅದೇ ಬೆಕ್ಕು..ಗೌರಿಬಿದನೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ದಾಖಲೆಗಳನ್ನ ರಕ್ಷಣೆ ಮಾಡೋಕೆ ಅಲ್ಲಿನ ಪೊಲೀಸರು ಎರಡು ಬೆಕ್ಕುಗಳನ್ನ ಕಾವಲಿಟ್ಟಿದ್ದು ಅದಕ್ಕೆ ಬೀರಾ ಅಂತ ಹೆಸರಿಟ್ಟಿದ್ದಾರೆ. ಠಾಣೆಯಲ್ಲೇ ಇದು ವಾಸ್ತವ್ಯ ಹೂಡಿದ್ದು ಅದಕ್ಕೆ ಬೇಕಾದ ಎಲ್ಲ ರೀತಿಯ ಆಹಾರವನ್ನ ಅಲ್ಲೇ ನೀಡಲಾಗ್ತಿದೆ.

-masthmagaa.com

Contact Us for Advertisement

Leave a Reply