ಕಾಬುಲ್​​ ಹೋಟೆಲ್​ಗಳನ್ನು ತೊರೆಯಿರಿ: ಪ್ರಜೆಗಳಿಗೆ ಅಮೆರಿಕ, ಬ್ರಿಟನ್ ವಾರ್ನಿಂಗ್

masthmagaa.com:

ಕಾಬೂಲ್​ನಲ್ಲಿರೋ ಹೋಟೆಲ್​​ಗಳಿಂದ ಅದ್ರಲ್ಲೂ ಫೇಮಸ್ ಆಗಿರೋ ಸೆರೆನಾ ಹೋಟೆಲ್​​ನಿಂದ ಆದಷ್ಟು ಬೇಗ ಜಾಗ ಖಾಲಿ ಮಾಡಿ ಅಂತ ಅಮೆರಿಕ ಮತ್ತು ಬ್ರಿಟನ್ ತನ್ನ ಪ್ರಜೆಗಳಿಗೆ ಸೂಚಿಸಿದೆ. ಅಂದಹಾಗೆ ಈ ಸೆರೆನಾ ಐಷಾರಾಮಿ ಹೋಟೆಲ್ ಆಗಿದ್ದು, ತಾಲಿಬಾನ್ ಟೇಕೋವರ್​​ಗೂ ಮುನ್ನ ವಿದೇಶಿಗರು ಹೋದ್ರೆ ಅಲ್ಲೇ ಹೆಚ್ಚಾಗಿ ತಂಗುತ್ತಿದ್ರು. ಆದ್ರೀಗ ಅಲ್ಲಿಗೆ ಹೋಗ್ಬೇಡಿ ಅಂತ ಅಮೆರಿಕ, ಬ್ರಿಟನ್ ತಿಳಿಸಿದೆ. ಅಂದಹಾಗೆ ಈ ಹೋಟೆಲ್​​ ಮೇಲೆ ಈಗಾಗಲೇ ಎರಡೆರಡು ಬಾರಿ ಮೂಲಭೂತವಾದಿಗಳ ದಾಳಿಗೆ ತುತ್ತಾಗಿತ್ತು. ಆದ್ರೆ ಆಗ ದಾಳಿ ನಡೆಸಿದ್ದಿದ್ದು ತಾಲಿಬಾನಿಗಳೇ.. ಆದ್ರೆ ಈಗ ಯಾವ ಅಪಾಯ ಎದುರಾಗಿದೆ ಅನ್ನೋದನ್ನ ಅಮೆರಿಕ ಆಗಲೀ, ಬ್ರಿಟನ್ ಆಗಲೀ ಸ್ಪಷ್ಟವಾಗಿ ಹೇಳಿಲ್ಲ.

-masthmagaa.com

Contact Us for Advertisement

Leave a Reply