ಇಸ್ರೇಲ್​​​ ಕಡೆಗೆ ಲೆಬನಾನ್​ನಿಂದಲೂ ಹಾರಿತು ರಾಕೆಟ್!

masthmagaa.com:

ಗಾಜಾ ಪಟ್ಟಿಯಲ್ಲಿರೋ ಹಮಾಸ್ ಪಡೆ ವಿರುದ್ಧ ಹೋರಾಡ್ತಿರೋ ಇಸ್ರೇಲ್​​ಗೆ ಹೊಸ ಸಂಕಷ್ಟ ಎದುರಾಗಿದೆ. ಅದೇನಂದ್ರೆ ಲೆಬನಾನ್​​ನಲ್ಲಿರೋ ಇರಾನ್ ಬೆಂಬಲಿತ ಹಿಜ್ಬೊಲ್ಲಾ ಉಗ್ರರು. ಲೆಬನಾನ್​ನ ದಕ್ಷಿಣ ಭಾಗದಿಂದ ಇಸ್ರೇಲ್ ಕಡೆಗೆ 3 ರಾಕೆಟ್ ಹಾರಿಸಲಾಗಿದೆ. ಆದ್ರೆ ಅದು ಇಸ್ರೇಲಿ ಮೆಡಿಟರೇನಿಯನ್ ಸಮುದ್ರಲ್ಲಿ ಬಿದ್ದಿದ್ದು, ಯಾವುದೇ ಹಾನಿಯಾಗಿಲ್ಲ. ಆದ್ರೂ ಕೂಡ ಇದೊಂದು ಅಪಾಯದ ಕರೆಗಂಟೆಯಾಗಿದೆ. 2006ರಲ್ಲಿ ಇಸ್ರೇಲ್ ಲೆಬನಾನ್​​ನ ದಕ್ಷಿಣ ಭಾಗದಲ್ಲಿ ಸ್ಟ್ರಾಂಗ್ ಆಗಿರೋ ಲೆಬನಾನ್ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ಅದಾದ ಬಳಿಕ ಹಿಜ್ಬೊಲ್ಲಾ ಸಂಘಟನೆ ತುಂಬಾ ಸೈಲೆಂಟಾಗೇ ಇತ್ತು. ಈ ಹಿಜ್ಬುಲ್ಲಾ ಉಗ್ರರು ಸುಧಾರಿತ ರಾಕೆಟ್​​ಗಳನ್ನು ಕೂಡ ಹೊಂದಿದ್ದಾರೆ.

-masthmagaa.com

Contact Us for Advertisement

Leave a Reply