ಹಿಂದೂ ಮಹಾಸಾಗರದಲ್ಲಿ ಚೀನಾಗೆ ಸ್ಪರ್ಧೆ: ನೌಕಾ ಸಾಮರ್ಥ್ಯ ಹೆಚ್ಚಿಸ್ತಿದೆ ಭಾರತ

masthmagaa.com:

ಹಿಂದೂ ಮಹಾಸಾಗರ ಹಾಗೂ ಇಂಡೊ-ಪೆಸಿಫಿಕ್‌ ರೀಜನ್‌ನಲ್ಲಿ ಚೀನಾ ತನ್ನ ಪ್ರಭಾವ ಹೆಚ್ಚಿಸೋಕೆ ಪ್ರಯತ್ನ ಪಡ್ತಿರೋದು ಎಲ್ಲರಿಗೂ ತಿಳಿದಿರೊ ವಿಷಯ. ಇದೀಗ ಈ ಪ್ರದೇಶದಲ್ಲಿ ಚೀನಾವನ್ನ ಎದುರಿಸೋಕೆ ಭಾರತ ತನ್ನದೇ ಆದ ಸ್ಟ್ರಾಟಜಿಕ್‌ ಪ್ಲಾನ್‌ ಹಾಕಿಕೊಂಡಿದೆ. ಇದರ ಭಾಗವಾಗಿ 2035ರ ವೇಳೆಗೆ 175 ಯುದ್ಧ ನೌಕೆಗಳನ್ನ ಹೊಂದೋಕೆ ಮುಂದಾಗಿದೆ. ಪ್ರಸ್ತುತ ಭಾರತೀಯ ನೌಕಾಪಡೆ 68 ಯುದ್ಧ ನೌಕೆಗಳನ್ನ ಹೊಂದಿದ್ದು, ಉಳಿದ ಯುದ್ಧ ನೌಕೆಗಳನ್ನ ತಯಾರಿಸಲು ಆರ್ಡರ್‌ ಕೊಡಲಾಗಿದೆ. ಈ ಮೂಲಕ ಹಿಂದೂ ಮಹಾಸಾಗರದಲ್ಲಿ ತನ್ನ ಹಿತಾಸಕ್ತಿ ಸುರಕ್ಷಿಸಿಕೊಳ್ಳೊಕೆ ಹಾಗೂ ಚೀನಾವನ್ನ ಸಮರ್ಥವಾಗಿ ಫೇಸ್‌ ಮಾಡೋಕೆ ಭಾರತ 2 ಲಕ್ಷ ಕೋಟಿ ರೂಪಾಯಿ ಪ್ರಾಜೆಕ್ಟ್‌ ಹಾಕಿಕೊಂಡಿದೆ. ಇನ್ನು 2035ರ ವೇಳೆಗೆ 200 ಆಗಿಲ್ಲ ಅಂದ್ರೂ ಕನಿಷ್ಠ 175 ಯುದ್ಧ ನೌಕೆಗಳನ್ನ ಹೊಂದುವುದು ಭಾರತದ ಗುರಿಯಾಗಿದೆ. ಹಿಂದೂ ಮಹಾಸಾಗರ ಹಾಗೂ ಅದರಾಚೆಗೆ ನಮ್ಮ ಮೊಬಿಲಿಟಿ ಅಥ್ವಾ ಚಲನವಲನಗಳನ್ನ ಹೆಚ್ಚಿಸೋದು ಇಂಪಾರ್ಟೆಂಟ್‌ ಆಗಿದೆ. ಯುದ್ಧ ನೌಕೆಗಳ ಜೊತೆಗೆ ಫೈಟರ್‌ ಜೆಟ್‌, ವಿಮಾನ, ಹೆಲಿಕಾಪ್ಟರ್‌ಗಳು ಹಾಗೂ ಡ್ರೋನ್‌ಗಳ ಸಂಖ್ಯೆಯನ್ನ ಕೂಡ ಹೆಚ್ಚಿಸಾಗುವುದು ಅಂತ ಅಧಿಕಾರಿಗಳು ಹೇಳಿದ್ದಾರೆ. ಅಂದ್ಹಾಗೆ ಕಡಲ ತೀರದಲ್ಲಿ ಹೆಚ್ತಿರೊ ಚೀನಾದ ಬೆದರಿಕೆಯನ್ನ ಇಗ್ನೋರ್‌ ಮಾಡೋಕಾಗಲ್ಲ. ಚೀನಾದ ಪೀಪಲ್ಸ್‌ ಲಿಬರೇಶನ್‌ ಆರ್ಮಿ-ನೇವಿ, ಜಿಬೌತಿ ಹಾಗೂ ಪಾಕಿಸ್ತಾನದ ಕರಾಚಿ, ಗ್ವಾದಾರ್‌ನಲ್ಲಿ ವಿದೇಶಿ ನೆಲೆಗಳ ಜೊತೆಗೆ ಅಗ್ರೆಸಿವ್‌ ಆಗಿ ಮುಂದುವರೆತಿದೆ. ಅದೇ ರೀತಿ ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಹಾಗೂ ಇಂಡೋ – ಪೆಸಿಫಿಕ್‌ ಪ್ರದೇಶದಲ್ಲೂ ತನ್ನ ಪ್ರಭಾವ ಬೆಳೆಸೋಕೆ ಎಷ್ಟೋ ಸಾಧ್ಯನೋ ಅಷ್ಟು ಪ್ರಯತ್ನ ಪಡ್ತಿದೆ. ಅಷ್ಟೇ ಅಲ್ದೇ 355 ಯುದ್ಧ ನೌಕೆಗಳು ಹಾಗೂ ಸಬ್‌ಮರೀನ್‌ಗಳನ್ನ ಹೊಂದಿ ವಿಶ್ವದ ಅತಿದೊಡ್ಡ ನೌಕಾ ಸೇನೆಯನ್ನ ಚೀನಾ ಹೊಂದಿದೆ. ಕಳೆದ 10 ವರ್ಷಗಳಲ್ಲೇ 150 ಯುದ್ಧ ನೌಕೆಗಳನ್ನ ಚೀನಾ ತನ್ನ ನೌಕಾ ಸೇನೆಗೆ ಆಡ್‌ ಮಾಡಿದೆ. ಅಲ್ದೇ ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ಯುದ್ದ ನೌಕೆಗಳನ್ನ ತಯಾರು ಮಾಡ್ತಿದೆ. ವರದಿಗಳ ಪ್ರಕಾರ ಮುಂದಿನ ಐದಾರು ವರ್ಷಗಳಲ್ಲಿ ಚೀನಾ 555 ಯುದ್ಧ ನೌಕೆಗಳನ್ನ ಹೊಂದಬಹುದು ಅಂತ ಅಂದಾಜಿಸಲಾಗಿದೆ. ಅಲ್ದೇ ಅದೇ ವೇಳೆ ಚೀನಾದ ವಿಮಾನಗಳು ಕೂಡ ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಹಾರಾಡುವ ಸಾಧ್ಯತೆಯಿದೆ. ಹೀಗಾಗಿ ಭಾರತ ಕೂಡ ತನ್ನ ಸಿದ್ಧತೆಯಲ್ಲಿ ಇರಬೇಕು ಅಂತ ಮೂಲಗಳು ತಿಳಿಸಿವೆ. ಆದ್ರೆ ಚೀನಾಗೆ ಹೋಲಿಸಿದ್ರೆ ಭಾರತದ ನೌಕಾ ಸಾಮರ್ಥ್ಯ ಕಡಿಮೆನೇ. ಅಲ್ದೇ ಯುದ್ಧ ನೌಕೆಗಳ ನಿರ್ಮಾಣ ಕೂಡ ತುಂಬಾ ಸ್ಲೋ ಇದೆ. ಹೀಗಾಗಿ ಚೀನಾದ ಸಂಖ್ಯೆಯನ್ನ ಭಾರತ ರೀಚ್‌ ಮಾಡೋದು ಕಷ್ಟ ಅಂತಾನೇ ಹೇಳಲಾಗ್ತಿದೆ.

 

-masthmagaa.com

Contact Us for Advertisement

Leave a Reply