masthmagaa.com:
ನಮ್ಮ ಕನ್ನಡದ ಸಿನಿಮಾ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗ್ತಾ ಇದೆ. ಬೇರೆ ಭಾಷೆಯ ಪ್ರೇಕ್ಷಕರು ಸಹ ಕನ್ನಡದಿಂದ ಡಬ್ ಆದ ಸಿನಿಮಾಗಳನ್ನ ನೋಡಿ ಇಷ್ಟ ಪಡ್ತಿದ್ದಾರೆ. ಈಗ ಟಾಲಿವುಡ್ ನಟ ಸಿದ್ದಾರ್ಥ್ ಅವರು ಕನ್ನಡದಲ್ಲಿ ಸಿನಿಮಾ ಮಾಡೋ ಪ್ಲಾನ್ ಮಾಡಿದ್ದಾರೆ. ಈ ಬಗ್ಗೆ ಸುದೀಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರು ಕನ್ನಡ ಮಾತ್ರವಲ್ಲದೇ ಟಾಲಿವುಡ್ ಬಾಲಿವುಡ್‌ನಲ್ಲೂ ಒಳ್ಳೆ ಹೆಸರನ್ನ ಮಾಡಿದ್ದಾರೆ. ಜೊತೆಗೆ ಬೇರೆ ಚಿತ್ರರಂಗದವರ ಜೊತೆ ಒಳ್ಳೆ ಫ್ರೆಂಡ್‌ಶಿಪ್ ಸಹ ಹೊಂದಿದ್ದಾರೆ. ಇದೀಗ ಸುದೀಪ್ ಅವರು ಟಾಲಿವುಡ್ ಆಕ್ಟರ್ ಸಿದ್ದಾರ್ಥ್ ಅವರನ್ನ ಕನ್ನಡಕ್ಕೆ ಪರಿಚಯಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿದ್ದಾರ್ಥ್ ಅವರ ಮುಂದಿನ ಕನ್ನಡ ಸಿನಿಮಾಗೆ ಶುಭ ಹಾರೈಸಿದ್ದಾರೆ.
“ಪ್ರೀತಿಯ ಸಹೋದರ ನಟ ಸಿದ್ಧಾರ್ಥ್ ಅವರನ್ನು ಪ್ರೀತಿಯಿಂದ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಪರಿಚಯಿಸುತ್ತಿದ್ದೇನೆ. ಜೊತೆಗೆ ಮೊದಲ ಪ್ರಯತ್ನದಲ್ಲೇ ಕನ್ನಡ ಕಲಿತು ಸಿದ್ಧಾರ್ಥ್, ಅವರದೇ ದ್ವನಿ ನೀಡಿದ್ದಾರೆ. ಕನ್ನಡ ಸಿನಿಮಾ ಲೋಕಕ್ಕೆ ಸ್ವಾಗತ ಗೆಳೆಯ ಸಿದ್ದಾರ್ಥ್” ಅಂತ ಸುದೀಪ್ ಅವರು ಬರೆದುಕೊಂಡಿದ್ದಾರೆ.
ಸಿದ್ದಾರ್ಥ್ ಅವರು ʼಚಿಕ್ಕುʼ ಅನ್ನೋ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. ಈ ಸಿನಿಮಾದ ಪೋಸ್ಟರ್ ಅನ್ನೂ ಸಹ ಸುದೀಪ್ ಶೇರ್ ಮಾಡಿಕೊಂಡಿದ್ದಾರೆ.
-masthmagaa.com
Contact Us for Advertisement