ವೀಕೆಂಡ್ ಲಾಕ್​ಡೌನ್ ಇರುತ್ತಾ? ಇಲ್ವಾ? ನಾಳೆ ಸಿಎಂ ಸಭೆ

masthmagaa.com:

ಕೊರೋನಾ ಪರಿಸ್ಥಿತಿ ಸಂಬಂಧ ನಾಳೆ ಮಧ್ಯಾಹ್ನ 1 ಗಂಟೆಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ತಜ್ಞರು ಸೇರಿ ಅನೇಕರು ಭಾಗವಹಿಸಲಿದ್ದಾರೆ. ವೀಕೆಂಡ್‌ ಕರ್ಫ್ಯು ತೆಗಿಬೇಕಾ ಬೇಡ್ವಾ ಅಥವಾ ಯಾವರೀತಿಯ ನಿರ್ಧಾರವನ್ನ ತೆಗೆದುಕೊಳ್ಳಬೇಕು ಅನ್ನುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ತೇವೆ. 2.30ರ ಒಳೆಗೆ ಜನರಿಗೆ ನಿರ್ಧಾರವನ್ನು ತಿಳಿಸ್ತೇವೆ ಅಂತ ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ. ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ಸೇರಿದಂತೆ ಕೆಲವೊಂದು ನಿರ್ಬಂಧಗಳನ್ನ ತೆಗೀಬೇಕು ಅನ್ನೋ ಒತ್ತಡ ಹೆಚ್ಚಾಗಿದೆ. ಆದ್ರೆ ಬಿಹಾರದಲ್ಲಿ ಈಗಿರೋ ನಿರ್ಬಂಧಗಳನ್ನ ಫೆಬ್ರವರಿ 6ನೇ ತಾರೀಖಿನವರೆಗೆ ವಿಸ್ತರಿಸಲಾಗಿದೆ.

-masthmagaa.com

Contact Us for Advertisement

Leave a Reply