ತರಕಾರಿ ರೇಟು ಗಗನಕ್ಕೆ! ಯಾಕೆ ಹೀಗಾಗ್ತಿದೆ?

masthmagaa.com:

ಬೆಂಗಳೂರು: ನಿರಂತರ ಮಳೆ, ಪ್ರವಾಹದಿಂದಾಗಿ ತರಕಾರಿ ಬೆಳೆ ನಾಶವಾಗಿದ್ದು, ತರಕಾರಿ ರೇಟು ಗಗನಕ್ಕೇರಿದೆ. ಕರ್ನಾಟಕದಲ್ಲಿ ಸೊಪ್ಪು ತರಕಾರಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಎಲ್ಲಾ ಅಡುಗೆಗಳಿಗೆ ಅನಿವಾರ್ಯವಾದ ಟೊಮ್ಯಾಟೋ ರೇಟು 60ರಿಂದ 70 ರೂಪಾಯಿಗೆ ಮಾರಾಟ ಮಾಡಲಾಗ್ತಿದೆ. ಈರುಳ್ಳಿ ಬೆಲೆ ಕೂಡ ಹತ್ತತ್ರ 40ರಿಂದ 50 ರೂಪಾಯಿ ರೇಂಜ್​​ನಲ್ಲಿ ಮಾರಲಾಗ್ತಿದೆ. ಇನ್ನು ಪಕ್ಕದ ತಮಿಳುನಾಡಿನಲ್ಲೂ ಅದೇ ಕಥೆಯಾಗಿದೆ. ಚೆನ್ನೈನಲ್ಲಿ ಒಂದು ಕೆಜಿ ಟೊಮ್ಯಾಟೋ ಬೆಲೆ 140 ರೂಪಾಯಿ ಆಗೋಗಿದೆ. ಈ ತಿಂಗಳ ಆರಂಭದಲ್ಲಿ ಚೆನ್ನೈನಲ್ಲಿ ಒಂದು ಕೆಜಿ ಟೊಮ್ಯಾಟೋಗೆ 40 ರೂಪಾಯಿ ಇತ್ತು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈ ಪರಿಸ್ಥಿತಿ ಉಂಟಾಗಿದೆ. ಆಂಧ್ರದಲ್ಲಂತೂ ಅತಿ ಹೆಚ್ಚು ಟೊಮ್ಯಾಟೋ ಬೆಳೆಯೋ ಪ್ರದೇಶದಲ್ಲೇ ಪ್ರವಾಹ ಸಂಭವಿಸಿದ್ದು, ಪ್ರತಿ ಕೆಜಿ ಟೊಮ್ಯಾರೋ ಬೆಲೆ 100 ರೂಪಾಯಿ ಗಡಿ ದಾಟಿದೆ.

-masthmagaa.com

Contact Us for Advertisement

Leave a Reply