‘ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆʼ ಇಡುವವರ ವಿರುದ್ಧ ಈ ರೀತಿ ಕ್ರಮ ಯಾಕಿಲ್ಲ? ಸಿಖ್‌ ಧಾರ್ಮಿಕ ಸಂಘಟನೆ ಅಕಾಲ್‌ ತಖ್ತ್‌ ಪ್ರಶ್ನೆ!

masthmagaa.com:

ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಿಎಂ ಭಗವಂತ್ ಮಾನ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಿಖ್‌ರ ಅಕಾಲ್ ತಖ್ತ್ ಸಂಘಟನೆ ತೀವ್ರ ಖಂಡನೆ ವ್ಯಕ್ತಪಡಿಸಿದೆ. ‘ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆʼ ಇಡುವವರ ವಿರುದ್ಧ ಇದೇ ರೀತಿ ಕ್ರಮವನ್ನ ಏಕೆ ತೆಗೆದುಕೊಳ್ಳುವುದಿಲ್ಲ ಅಂತ ಕಟುವಾಗಿ ಪ್ರಶ್ನಿಸಿದೆ. ಸಿಖ್‌ರ ಪ್ರಮುಖ ಧಾರ್ಮಿಕ ಸಂಘಟನೆಯಾದ ಅಕಾಲ್ ತಖ್ತ್ ನ ಜತೇದಾರ್ ಗಿಯಾನಿ ಹರ್‌ಪ್ರೀತ್ ಸಿಂಗ್ ಅವ್ರು ಅಮೃತಪಾಲ್ ಕೇಸ್‌ಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಎಲ್ಲಾ ಸಿಖ್ ಯುವಕರನ್ನ ಬಿಡುಗಡೆ ಮಾಡಬೇಕು ಅಂತ ಆಗ್ರಹ ಮಾಡಿದ್ದಾರೆ. ಅಷ್ಟೇ ಅಲ್ಲ ಬಿಡುಗಡೆ ಮಾಡೋದಕ್ಕೆ ಪಂಜಾಬ್‌ ಸರ್ಕಾರಕ್ಕೆ 24 ಗಂಟೆಗಳ ಡೆಡ್‌ ಲೈನ್‌ ಕೂಡ ಕೊಟ್ಟಿದ್ದಾರೆ. ಅಮೃತಪಾಲ್ ಮತ್ತು ಖಲಿಸ್ತಾನದ ಬೇಡಿಕೆಯನ್ನ ಬೆಂಬಲಿಸಿದ ಆರೋಪದಲ್ಲಿ ಬಂಧಿಸಲ್ಪಟ್ಟವರ ವಿರುದ್ಧ, ( ಎನ್ಎಸ್ಎ )ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಏಕೆ ಹಾಕಬೇಕು? ಅಂತ ಪ್ರಶ್ನಿಸಿದ್ದಾರೆ. ಜೊತೆಗೆ ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆಯಿಡುವ ಲಕ್ಷಾಂತರ ಜನರಿದ್ದಾರೆ. ಹಿಂದೂ ರಾಷ್ಟ್ರಕ್ಕಾಗಿ ಕರೆ ನೀಡುವವರನ್ನೂ ಸಹ ಬಂಧಿಸಬೇಕು. ಅವರ ವಿರುದ್ಧವೂ ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಅಂತ ಆಗ್ರಹಿಸಿದ್ದಾರೆ. ಇತ್ತ ಯಾವುದೇ ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಅನ್ನೋದು ಕಂಡುಬಂದ್ರೆ ಅವ್ರನ್ನ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಅಂತ ಸಿಎಂ ಮಾನ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನಚ್ಚರಿಕಾ ಕ್ರಮವಾಗಿ ಬಂಧಿಸಲಾಗಿದ್ದ 353 ಜನ್ರಲ್ಲಿ 197 ಮಂದಿಯನ್ನ ಬಿಡುಗಡೆ ಮಾಡಲಾಗಿದೆ.ಇನ್ನೊಂದ್‌ ಕಡೆ ಮಾರ್ಚ್‌ 21ರ ಸಿಸಿಟಿವಿ ಫೂಟೇಜ್‌ ಒಂದ್ರಲ್ಲಿ ಅಮೃತ್‌ಪಾಲ್‌ ದೆಹಲಿಯಲ್ಲಿ ಓಡಾಡ್ತ ಇದ್ದ ಅನ್ನೋದು ತಿಳಿದು ಬಂದಿದೆ. ಮಾಸ್ಕ್‌ ಹಾಕಿ ಟರ್ಬನ್‌ ಇಲ್ಲದೆ ಅಮೃತ್‌ಪಾಲ್‌ ದೆಹಲಿಯ ಬೀದಿಯಲ್ಲಿ ತಿರುಗಾಡ್ತಿರೋದು ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ. ಈ ನಡುವೆ ಪಂಜಾಬಿ ಭಾಷೆಯಲ್ಲಿ ಪ್ರಸಾರ ಆಗ್ತಿರೋ ಬಿಬಿಸಿ ಚಾನೆಲ್‌ನ ಟ್ವಿಟರ್‌ ಅಕೌಂಟ್‌ನ್ನ ಭಾರತದಲ್ಲಿ ತಡೆಹಿಡಿಯಲಾಗಿದೆ. ಇದಕ್ಕೆ ಸ್ಪಷ್ಟ ಕಾರಣ ಇನ್ನು ತಿಳಿದು ಬಂದಿಲ್ಲ. ಇತ್ತೀಚೆಗೆ ಕೆಲವು ಪಂಜಾಬಿನ ಪತ್ರಕರ್ತರು ಸೇರಿದಂತೆ ಖಲಿಸ್ತಾನಿ ಪರ ನಿಲುವು ಹೊಂದಿದ್ದ ಅನೇಕ ಸಿಖ್ ಮುಖಂಡರ ಟ್ವಿಟರ್‌ ಅಕೌಂಟ್‌ಗಳನ್ನ ತಡೆಹಿಡಿಯಲಾಗಿತ್ತು.

-masthmagaa.com

Contact Us for Advertisement

Leave a Reply