ಬಿಕಿನಿ ಧರಿಸಿ ಓಡಾಡಿದ ಮಹಿಳೆಯನ್ನು ಬಂಧಿಸಿದ ಪೊಲೀಸರು..!

ಫಿಲಿಪ್ಪೀನ್ಸ್​: ಮಹಿಳಾ ಟೂರಿಸ್ಟ್ ಒಬ್ಬರು ಬಿಕಿನಿ ಧರಿಸಿ ಬೀಚ್​​ನಲ್ಲಿ ಓಡಾಡಿದ್ದಕ್ಕೆ ಪೊಲೀಸರು ಅರೆಸ್ಟ್​ ಮಾಡಿ ದಂಡ ವಿಧಿಸಿದ್ದಾರೆ. ಫಿಲಿಪ್ಪೀನ್ಸ್​ನಲ್ಲಿ ಬೋರಾಕೆ ಐಲ್ಯಾಂಡ್​ನಲ್ಲಿ ಈ ಘಟನೆ ನಡೆದಿದೆ.

ತೈವಾನ್ ಮೂಲದ 26 ವರ್ಷದ ಲಿನ್ ಜೂ ತಿಂಗ್ ಎಂಬುವವರು ತಮ್ಮ ಬಾಯ್ ಫ್ರೆಂಡ್ ಜೊತೆ ತಿರುಗಾಡಲು ಫಿಲಿಪ್ಪೀನ್ಸ್​​ಗೆ ಬಂದಿದ್ದರು. ಈ ವೇಳೆ ಬೀಚ್ ಬಳಿ ಬಿಕಿನಿ ಧರಿಸಿ ಓಡಾಡಿದ್ದಾರೆ. ಈ ವೇಳೆ ಸ್ಥಳೀಯರು ಆಕೆಯ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. ಫಿಲಿಪ್ಪೀನ್ಸ್​ನಲ್ಲಿ ಯುವತಿಯರು ಈ ರೀತಿಯ ಬಟ್ಟೆಗಳನ್ನೆಲ್ಲಾ ಹಾಕುವುದಿಲ್ಲ.

ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಫುಲ್ ವೈರಲ್ ಆಗಿದೆ. ಕೂಡಲೇ ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು, 3,400 ರೂಪಾಯಿ ದಂಡ ವಿಧಿಸಿದ್ದಾರೆ. ಆದ್ರೆ ಮಹಿಳೆ ಮೇಲೆ ಯಾವ ಕಾನೂನಿನ ಆಧಾರದಲ್ಲಿ ಅರೆಸ್ಟ್​ ಮಾಡಿದ್ದಾರೆ ಅನ್ನೋದು ಇನ್ನೂ ಬೆಳಕಿಗೆ ಬಂದಿಲ್ಲ. ಅಶ್ಲೀಲತೆಯ ಪ್ರದರ್ಶನಕ್ಕೆ ಸಂಬಂಧಿಸಿದ ಯಾವುದೋ ಪ್ರಕರಣದ ಅಡಿಯಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಈ ಯುವತಿ ಬಿಕಿನಿ ಧರಿಸಿ ಬೀಚ್​ನಲ್ಲಿ ಓಡಾಡುತ್ತಿದ್ದರು. ಇದರಿಂದಾಗಿ ಸ್ಥಳೀಯರು ಮತ್ತು ಟೂರಿಸ್ಟ್​ಗಳು ತುಂಬಾ ಪ್ರಮಾಣದಲ್ಲಿ ಫೋಟೋಗಳನ್ನು ತೆಗೆದಿದ್ದಾರೆ. ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದಿದ್ದಾರೆ. ಅಲ್ಲದೆ ಬೋರಾಕೆ ಐಲ್ಯಾಂಡ್​​ಗೆ ಸುತ್ತಾಡಲು ಬರುವ ಪ್ರವಾಸಿಗರು ಇಲ್ಲಿನ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಫಿಲಿಪ್ಪೀನ್ಸ್ ಪೊಲೀಸರು ಮನವಿ ಮಾಡಿದ್ದಾರೆ.

Contact Us for Advertisement

Leave a Reply