ಭೂಕಂಪ ಪೀಡಿತ ಟರ್ಕಿಗೆ ಸಹಾಯ ಹಸ್ತ ಚಾಚಿದ ಭಾರತ! ಎರಡು ಎನ್‌ಡಿಆರ್‌ಎಫ್ ತಂಡಗಳ ರವಾನೆ!

masthmagaa.com:

7.8 ತೀವ್ರತೆಯ ಭೂಕಂಪದಿಂದ ಅಕ್ಷರಶಃ ಯುದ್ಧಭೂಮಿಯಾಗಿರೋ ಟರ್ಕಿಯಲ್ಲಿ ಮತ್ತೊಮ್ಮೆ ಭೂಕಂಪನವಾಗಿದೆ. 24 ಗಂಟೆ ಅವಧಿಯಲ್ಲೇ ಮೂರು ಸಲ ಸಲ ಭೂಮಿ ಕಂಪಿಸಿದೆ. 7.6 ಹಾಗೂ 6.0 ತೀವ್ರತೆಯ ಭೂಕಂಪಗಳು ದಾಖಲಾಗಿವೆ. ಇದ್ರಿಂದ ಮೃತಪಟ್ಟವರ ಸಂಖ್ಯೆ 1,600ಕ್ಕೆ ಏರಿಕೆಯಾಗಿದೆ. ಜೊತೆಗೆ 5 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕಟ್ಟಡಗಳಲ್ಲಿ ಜನರು ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗ್ತಿದೆ. ಇದೇ ವೇಳೆ ಟರ್ಕಿಯಲ್ಲಿ ಉಂಟಾಗ್ತಿರೋ ಹಿಮಪಾತದಿಂದ ರಕ್ಷಣಾ ಕಾರ್ಯಾಚರಣೆ ನಡೆಸೋಕೆ ತೊಂದ್ರೆ ಆಗ್ತಿದೆ. ಇನ್ನು ಭೂಮಿ ಸತತವಾಗಿ ಕನಿಷ್ಠ 78 ಬಾರಿ ಕಂಪಿಸಿದೆ ಇದ್ರಿಂದ ಸುಮಾರು 1,700 ಕಟ್ಟಡಗಳು ನೆಲಸಮವಾಗಿವೆ ಅಂತ ಟರ್ಕಿ ಉಪಾಧ್ಯಕ್ಷ ಫೌತ್‌ ಒಕ್ಟೆಯ್‌ ಅವ್ರು ಮಾಹಿತಿ ನೀಡಿದ್ದಾರೆ. ಇನ್ನು ಟರ್ಕಿಯಲ್ಲಿ ಸಂಭವಿಸಿರೋ ಪ್ರಬಲ ಭೂಕಂಪದ ಬಗ್ಗೆ ಎರಡು ದಿನಗಳ ಹಿಂದಯೇ ಡಚ್‌ ರಿಸರ್ಚರ್‌ ಒಬ್ರು ಮಾಹಿತಿ ನೀಡಿದ್ರು ಅಂತ ತಿಳಿದು ಬಂದಿದೆ. Solar System Geometry Survey ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದ ಫ್ರ್ಯಾಂಕ್‌ ಹೂಗರ್‌ಬೀಟ್ಸ್‌, ಟರ್ಕಿಯಲ್ಲಿ ಭೂಕಂಪ ಆಗುವ ಸಾಧ್ಯತೆಯಿದೆ ಅಂತ ಫೆಬ್ರವರಿ 3ರಂದು ಮುನ್ಸೂಚನೆ ನೀಡಿದ್ರು ಎನ್ನಲಾಗಿದೆ.

ಇತ್ತ ಪ್ರಬಲ ಭೂಕಂಪದಿಂದ ತತ್ತರಿಸಿ ಹೋಗಿರೋ ಟರ್ಕಿಗೆ ಜಗತ್ತಿನ ಹಲವು ರಾಷ್ಟ್ರಗಳು ಸಹಾಯ ಹಸ್ತ ಚಾಚುತ್ತಿವೆ. ಟರ್ಕಿ ಜನರ ಜೊತೆ ಭಾರತ ಇರುತ್ತೆ ಅಂತ ಪ್ರಧಾನಿ ನರೇಂದ್ರ ಮೋದಿ ಅನೌನ್ಸ್‌ ಮಾಡಿದ ಬೆನ್ನಲ್ಲೇ 100 ಸಿಬ್ಬಂದಿ ಹಾಗೂ ವಿಶೇಷ ತರಬೇತಿ ಪಡೆದ ಶ್ವಾನದಳ, ಅಗತ್ಯ ಉಪಕರಣಗಳೊಂದಿಗೆ ಎರಡು ಎನ್‌ಡಿಆರ್‌ಎಫ್ ತಂಡಗಳನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಟರ್ಕಿಗೆ ಕಳಿಸಲಾಗುವುದು ಅಂತ ಪ್ರಧಾನ ಮಂತ್ರಿ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದ್ರ ಜೊತೆಗೆ ಅಗತ್ಯ ಔಷಧಿಗಳೊಂದಿಗೆ ವೈದ್ಯಕೀಯ ತಂಡಗಳನ್ನು ಸಹ ಕಳಿಸೋಕೆ ತಯಾರಿ ನಡೆಸಲಾಗ್ತಿದೆ. ಇತ್ತ ಟರ್ಕಿ ಹಾಗೂ ಸಿರಿಯಾಗೆ ಬೇಕಾದ ಅಗತ್ಯ ಸಹಾಯವನ್ನ ಮಾಡೋಕೆ ಫ್ರಾನ್ಸ್‌ ರೆಡಿ ಇದೆ ಅಂತ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ಹೇಳಿದ್ದಾರೆ. ಜೊತೆಗೆ ಚೀನಾ ಕೂಡ ಟರ್ಕಿಗೆ ಅಗತ್ಯ ಸಹಾಯ ಮಾಡೋದಾಗಿ ಅನೌನ್ಸ್‌ ಮಾಡಿದೆ. ಇತ್ತ ಅಮೆರಿಕದ ನ್ಯೂಯಾರ್ಕ್‌ನಲ್ಲೂ 3.8 ತೀವ್ರತೆಯ ಭೂಕಂಪ ಸಂಭವಿಸಿದೆ.

-masthmagaa.com

Contact Us for Advertisement

Leave a Reply