ಸೌದಿ ಪ್ರಿನ್ಸ್‌ ಜೊತೆ ಮೋದಿ ಹೋಲಿಕೆ: ಅಮೆರಿಕ ವಿರುದ್ದ ಭಾರತ ಅಸಮಾಧಾನ

masthmagaa.com:

ಇತ್ತೀಚೆಗೆ ಅಮೆರಿಕ ಮೂಲದ ಪತ್ರಕರ್ತ ಜಮಾಲ್‌ ಕಶೌಗಿ ಹತ್ಯೆಗೆ ಸಂಬಂಧಿಸಿದಂತೆ ಸೌದಿ ಪ್ರಿನ್ಸ್‌ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವ್ರು ಕಾನೂನು ಕ್ರಮದಿಂದ ಮುಕ್ತರಾಗಿದ್ದಾರೆ ಅಂತ ಅಮೆರಿಕ ಹೇಳಿತ್ತು. ಅದೇ ಟೈಮಲ್ಲಿ ಅಮೆರಿಕ ಈ ರೀತಿ ಕಾನೂನು ಇಮ್ಯುನಿಟಿ ಕೊಟ್ಟಿರೋದು ಮೊದಲ ಬಾರಿ ಏನಲ್ಲ. ಈ ಹಿಂದೆಯೂ ಹಲವು ನಾಯಕರಿಗೆ ಇಮ್ಯುನಿಟಿ ಕೊಟ್ಟಿದೆ. ಅದ್ರಲ್ಲಿ ಪ್ರಧಾನಿ ಮೋದಿ ಕೂಡ ಒಬ್ರು ಅಂತ ಹೋಲಿಕೆ ಮಾಡಿ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ವಕ್ತಾರ ವೇದಾಂತ್‌ ಪಟೇಲ್‌ ಹೇಳಿದ್ರು. ಇದೀಗ ಅಮೆರಿಕದ ಈ ಹೇಳಿಕೆಗೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ಆ ಸಂದರ್ಭದಲ್ಲಿ ಮೋದಿ ಹೆಸರನ್ನ ಉಲ್ಲೇಖ ಮಾಡಿದ್ದು ಯಾಕೆ, ಅದರ ಅವಶ್ಯಕತೆ ಏನಿತ್ತು ಹಾಗೂ ಯಾವ ರೀತಿಯಲ್ಲಿ ಸಂಬಂಧವಿದೆ ಅನ್ನೋದು ಅರ್ಥವಾಗಿಲ್ಲ ಅಂತ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂಧಮ್‌ ಭಗ್ಚಿ ಹೇಳಿದ್ದಾರೆ. ಜೊತೆಗೆ ಡಿಸೆಂಬರ್‌ನಲ್ಲಿ ಮೋದಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಅನ್ನೊ ಮಾಹಿತಿ ತಪ್ಪು. ನಮ್ಮ ಕಡೆಯಿಂದ ಅಂತ ಯಾವುದೇ ಪ್ರಸ್ತಾವನೆಯನ್ನ ನಾವು ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಅಮರಿಕ ಹಾಗೂ ಭಾರತ ವಿಶೇಷ ಸಂಬಂಧವನ್ನ ಹೊಂದಿವೆ. ಉಭಯ ದೇಶಗಳ ಸಂಬಂಧಗಳು ಸ್ಟ್ರಾಂಗ್‌ಆಗಿ ಬೆಳಿತಾ ಇದಾವೆ. ಭಾರತ ಈ ಸಂಬಂಧವನ್ನ ಇನ್ನಷ್ಟು ಆಳಕ್ಕೆ ಒಯ್ಯೋಕೆ ನೋಡುತ್ತೆ ಅಂತ ಹೇಳಿದ್ದಾರೆ. ಅಂದ್ಹಾಗೆ 2014ರಲ್ಲಿ ಮೋದಿ ಪ್ರಧಾನಿ ಆದ ಬಳಿಕ ಅವ್ರಿಗೆ 2002ರ ಗುಜರಾತ್‌ ಗಲಭೆ ಪ್ರಕರಣದಲ್ಲಿ ಅಮೆರಿಕ ಲೀಗಲ್‌ ಇಮ್ಯುನಿಟಿಯನ್ನ ನೀಡಿತ್ತು. ಅಂದ್ರೆ ಈ ರೀತಿ ಇಮ್ಯುನಿಟಿ ಪಡೆದ ವ್ಯಕ್ತಿ ಅಮೆರಿಕಕ್ಕೆ ಬಂದಾಗ ಅವ್ರ ವಿರುದ್ಧ ಯಾವುದೇ ಕಾನೂನು ಕ್ರಮ ಇರಲ್ಲ.

-masthmagaa.com

Contact Us for Advertisement

Leave a Reply