ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಯುಎಇ ಆಟಗಾರರು.. IPL ಕಥೆ ಏನು?

masthmagaa.com:

ಯುಎಇ ಕ್ರಿಕೆಟ್ ತಂಡದ ಇಬ್ಬರು ಆಟಗಾರರ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ ಕೇಳಿ ಬಂದಿದ್ದು, ಇಬ್ಬರನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ICC) ಅಮಾನತು ಮಾಡಿದೆ. ಯುಎಇ ತಂಡದ ಬ್ಯಾಟ್ಸ್​ಮನ್ ಅಶ್ಫಾಕ್ ಅಹ್ಮದ್ ಮತ್ತು ಬೌಲರ್ ಅಮಿರ್ ಹಯಾತ್ ಅಮಾನತುಗೊಂಡ ಆಟಗಾರರಾಗಿದ್ದಾರೆ. ಇಬ್ಬರ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘಿಸಿದ ಆರೋಪವಿದೆ. ಹೀಗಾಗಿ ಅವರನ್ನ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಅಂತ ಐಸಿಸಿ ತಿಳಿಸಿದೆ.

ಅಂದ್ಹಾಗೆ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಲು ಲಂಚ ಸ್ವೀಕರಿಸಿದ್ದಕ್ಕಾಗಿ ಮತ್ತು ಇಂತಹ ಆಫರ್ ಬಂದಾಗ ಐಸಿಸಿ ಗಮನಕ್ಕೆ ತರದ ಕಾರಣಕ್ಕಾಗಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಇಬ್ಬರೂ ಆಟಗಾರರು ಈ ಸಂಬಂಧ 14 ದಿನಗಳ ಒಳಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಉತ್ತರ ನೀಡಬೇಕಿದೆ.

ಭ್ರಷ್ಟಾಚಾರದ ಆರೋಪದಲ್ಲಿ ಈಗಾಗಲೇ ಯುಎಇ ತಂಡದ ಮೂವರು ಆಟಗಾರರನ್ನು ಅಮಾನತು ಮಾಡಲಾಗಿದೆ. ಇದರಲ್ಲಿ ಮಾಜಿ ನಾಯಕ ಮೊಹಮ್ಮದ್ ನವೀದ್, ಬ್ಯಾಟ್ಸ್​ಮನ್ ಶೈಮಾನ್ ಅನ್ವರ್ ಮತ್ತು ವೇಗಿ ಖಾದಿರ್ ಅಹಮದ್ ಕೂಡ ಇದ್ದಾರೆ.

ಯುಎಇನಲ್ಲಿ ಕಲರ್​ಫುಲ್ ಟೂರ್ನಿ ಐಪಿಎಲ್​ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಅಲ್ಲಿನ ಆಟಗಾರರ ವಿರುದ್ಧವೇ ಮ್ಯಾಚ್​ ಫಿಕ್ಸಿಂಗ್ ಆರೋಪ ಕೇಳಿ ಬಂದಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ.

-masthmagaa.com

Contact Us for Advertisement

Leave a Reply