ಟ್ಯಾಕ್ಸಿ ಆಯ್ತು..ಈಗ ಉಬರ್ ಹೆಲಿಕಾಪ್ಟರ್ ಟೈಂ..!

ಇಷ್ಟು ದಿನ ಉಬರ್ ಟ್ಯಾಕ್ಸಿ ಬಗ್ಗೆ ಕೇಳುತ್ತಿದ್ರಿ. ಆದ್ರೆ ಈಗ ಉಬರ್ ಹೆಲಿಕಾಪ್ಟರ್ ಬರುತ್ತಿದೆ. ಯೆಸ್, ಸ್ವಲ್ಪ ಸಮಯದೆ ಹಿಂದೆ ಅಮೆರಿಕದ ನ್ಯೂಯಾರ್ಕ್‍ನಲ್ಲಿ ಕೆಲ ಗ್ರಾಹಕರಿಗೆ ಹೆಲಿಕಾಪ್ಟರ್ ಸೇವೆ ನೀಡಿದ್ದ ಕ್ಯಾಬ್ ಸಂಸ್ಥೆ ಉಬರ್ ಈಗ, ಆ ಸೇವೆಯನ್ನು ಎಲ್ಲಾ ಗ್ರಾಹಕರಿಗೂ ವಿಸ್ತರಿಸುತ್ತಿದೆ. ಆದ್ರೆ ಸದ್ಯಕ್ಕೆ ನಮಗೆ ಈ ಸೌಲಭ್ಯ ಸಿಗಲ್ಲ. ಅಮೆರಿಕದ ಮ್ಯಾನ್‍ಹಟನ್ ನಿಂದ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದ ನಡುವೆ ಮಾತ್ರ ಈ ಸೌಲಭ್ಯ ಸಿಗಲಿದೆ. ಇದ್ರಿಂದಾಗಿ ಪ್ರಯಾಣಿಕರ ಸಮಯ ಉಳಿತಾಯದ ಮಾಡಬಹುದು. ಅಂದಹಾಗೆ ಎಲ್ಲೋ ಕುಳಿತು ಬುಕ್ ಮಾಡಿದ್ರೆ ಅಲ್ಲಿಗೇ ಬಂದು ಹೆಲಿಕಾಪ್ಟರ್ ಪಿಕ್ ಮಾಡಲ್ಲ. ನಿಮ್ಮನ್ನು ಕ್ಯಾಬ್ ಮೂಲಕ ಮ್ಯಾನ್ ಹಟನ್‍ಗೆ ಕರ್ಕೊಂಡ್ ಹೋಗಿ ಅಲ್ಲಿಂದ ವಿಮಾಣ ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತೆ. ಈ ಸಂಬಂಧ ಉಬರ್ ಸಂಸ್ಥೆ ಟ್ವೀಟ್ ಮಾಡಿ ತಿಳಿಸಿದೆ. ಅಲ್ಲದೆ ಈ ಕುರಿತ ವಿಡಿಯೋ ಕೂಡ ಹಾಕಿದೆ.

Contact Us for Advertisement

Leave a Reply