ಶಿವಸೇನೆ ಕಾರ್ಯಕರ್ತರ ಬಳಿ ಕ್ಷಮೆಯಾಚಿಸಿದ ಉದ್ಧವ್ ಠಾಕ್ರೆ..!

ಶಿವಸೇನೆ ಕಾರ್ಯಕರ್ತರ ಬಳಿ ಉದ್ಧವ್ ಠಾಕ್ರೆ ಕ್ಷಮೆಯಾಚಿಸಿದ್ದಾರೆ. ಮೈತ್ರಿಯಿಂದಾಗಿ ಸೀಟುಗಳನ್ನು ಬಿಜೆಪಿಗೆ ಬಿಟ್ಟುಕೊಡಬೇಕಾಯ್ತು. ಇದರಿಂದ ಪಕ್ಷದ ಕೆಲ ಕಾರ್ಯಕರ್ತರಿಗೆ ಬೇಸರವಾಗಿರಬಹುದು. ಆದ್ರೆ ಸೀಟು ಬಿಟ್ಟುಕೊಟ್ಟಿರೋದಕ್ಕೆ ನಾನು ಕಾರ್ಯಕರ್ತರ ಬಳಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ಶಿವಸೇನೆ ವತಿಯಿಂದ ಅದ್ಧೂರಿಯಾಗಿ ದಸರಾ ಆಚರಿಸಲಾಯ್ತು. ಈ ವೇಳೆ ಬಿಜೆಪಿ ಜೊತೆ ಸೀಟು ಹಂಚಿಕೆ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಜೊತೆ ಮತ್ತೆ ಮೈತ್ರಿ ಮಾಡಿಕೊಂಡ ಕಾರಣವನ್ನು ವಿವರಿಸಿದ್ರು.

ಶಿವಸೇನೆ ಬಿಜೆಪಿ ಮುಂದೆ ತಲೆ ತಗ್ಗಿಸಿದೆ ಎಂದು ಹಲವರು ಹೇಳುತ್ತಾರೆ. ಆದ್ರೆ ಶಿವಸೇನೆ ತಲೆ ತಗ್ಗಿಸುವ ಪಕ್ಷವಲ್ಲ. ಒಪ್ಪಂದ ಅನ್ನೋದು ಮೈತ್ರಿಯ ಒಂದು ಭಾಗ. ಯಾವ ಕ್ಷೇತ್ರದಲ್ಲಿ ನಮಗೆ ವೋಟ್ ಶೇರ್ ಇಲ್ಲವೋ ಆ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದೇವೆ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ ಅಂದ್ರು.

ಅಂದಹಾಗೆ ಮಹಾರಾಷ್ಟ್ರದಲ್ಲಿ ಒಟ್ಟು 288 ಸೀಟುಗಳಿದ್ದು ಅದರಲ್ಲಿ 124ರಲ್ಲಿ ಬಿಜೆಪಿ ಸ್ಪರ್ಧಿಸಿದ್ರೆ, ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಇತರೆ ಮಿತ್ರ ಪಕ್ಷಗಳು ಸೆಣಸಲಿವೆ.

Contact Us for Advertisement

Leave a Reply