ಉಡುಪಿಯಲ್ಲಿ ಒಂದೇ ತಿಂಗಳಲ್ಲಿ 2 ತ್ರಿವಳಿ ತಲಾಖ್ ಕೇಸ್..!

ಉಡುಪಿಯಲ್ಲಿ ಒಂದೇ ತಿಂಗಳಲ್ಲಿ 2ನೇ ತ್ರಿಪಲ್ ತಲಾಖ್ ಪ್ರಕರಣ ದಾಖಲಾಗಿದೆ. 43 ವರ್ಷದ ಮಹಿಳೆಯೊಬ್ಬರು 50 ವರ್ಷದ ಪತಿಯ ವಿರುದ್ಧ ದೂರು ನೀಡಿದ್ದಾರೆ. ಇಂದ್ರಾಳಿ ನಿವಾಸಿ ಶಬಾನಾ 2000ರ ಫೆಬ್ರವರಿ 1ರಲ್ಲಿ ಶಕೀಲ್ ಅಹ್ಮದ್ ಎಂಬುವವನನ್ನು ಮದುವೆಯಾಗಿದ್ದರು. ಆದ್ರೆ ಶಕೀಲ್ ಅಹ್ಮದ್ ಮದುವೆಯಾದ ದಿನದಿಂದಲೂ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ.

ದಂಪತಿಗೆ ಮೂವರು ಮಕ್ಕಳಿದ್ದು, ಕಳೆದ 7 ವರ್ಷಗಳಲ್ಲಿ ಶಕೀಲ್ ಕಿರುಕುಳ ಮತ್ತಷ್ಟು ಹೆಚ್ಚಾಗಿದೆ. ವಿಚ್ಚೇದನ ನೀಡುವಂತೆ ಪ್ರತಿದಿನ ಪೀಡಿಸುತ್ತಿದ್ದ ಶಕೀಲ್ ಮಕ್ಕಳನ್ನೂ ಕೋಣೆಯಲ್ಲಿ ಕೂಡಿಹಾಕಿ ಹಿಂಸಿಸುತ್ತಿದ್ದ. ಆದ್ರೂ ಶಬಾನಾ ಮಾತ್ರ ಶಕೀಲ್‍ಗೆ ಡಿವೋರ್ಸ್ ನೀಡಲು ಒಪ್ಪಿರಲಿಲ್ಲ. ಹೀಗಾಗಿ ಶಕೀಲ್ ಕಳೆದ ಮಾರ್ಚ್‍ನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾನೆ.

ಅಲ್ಲದೆ ಇತ್ತೀಚೆಗೆ ಶಬಾನಾ ಇಂದ್ರಾಳಿ ದೇವಸ್ಥಾನದ ಬಳಿ ಹೋಗುತ್ತಿದ್ದಾಗ ಬಂದ ಶಕೀಲ್, ಮೂರು ಬಾರಿ ತಲಾಖ್ ಹೇಳಿದ್ದಾನೆ. ಜೊತೆಗೆ ಬೇರೆ ಮಹಿಳೆಯನ್ನು ಮದುವೆಯಾಗುತ್ತೇನೆ ಎಂದೂ ಹೇಳಿದ್ದಾನೆ. ಹೀಗಾಗಿ ಈಗ ಶಬಾನಾ ಬೇರೆ ದಾರಿಯಿಲ್ಲದೆ ಉಡುಪಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Contact Us for Advertisement

Leave a Reply