ಜಿ-7 ಶೃಂಗಸಭೆಗೆ ಬರುವಂತೆ ಭಾರತದ ಪ್ರಧಾನಿಗೆ ಯುಕೆ ಪ್ರಧಾನಿ ಆಹ್ವಾನ

masthmagaa.com:

ಈ ವರ್ಷದ G7 (Group of Seven) ಶೃಂಗಸಭೆಗೆ ಬರುವಂತೆ ಭಾರತದ ಪ್ರಧಾನಿ ಮೋದಿಯನ್ನ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್​ ಆಹ್ವಾನ ಕೊಟ್ಟಿದ್ದಾರೆ. ಜೊತೆಗೆ ಭಾರತವನ್ನ ‘ಜಗತ್ತಿನ ಔಷಧಾಲಯ’ ಅಂತ ಕರೆದಿರುವ ಬೋರಿಸ್​ ಜಾನ್ಸನ್​, ಜಗತ್ತಿನ 50 ಪರ್ಸೆಂಟ್​ಗೂ ಹೆಚ್ಚು ಕೊರೋನಾ ಲಸಿಕೆಯನ್ನ ಭಾರತ ಈಗಾಗಲೇ ಪೂರೈಕೆ ಮಾಡಿದೆ. ಕೊರೋನಾ ಸಮಯದಲ್ಲಿ ಭಾರತ ಮತ್ತು ಬ್ರಿಟನ್ ಒಟ್ಟಿಗೆ ಕೆಲಸ ಮಾಡಿದೆ ಅಂತಾನೂ ಹೇಳಿದ್ದಾರೆ. ಅಂದ್ಹಾಗೆ ಜೂನ್​ 11ರಿಂದ 13ರವರೆಗೆ ಬ್ರಿಟನ್​ನ ಕಾರ್ನ್​​ವಾಲ್​ ಪ್ರದೇಶದಲ್ಲಿ ಈ ಶೃಂಗಸಭೆ ನಡೆಯಲಿದೆ. ಗ್ರೂಪ್ ಆಫ್ ಸೆವೆನ್​ನಲ್ಲಿ ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಅಮೆರಿಕ ದೇಶಗಳಿವೆ. ಭಾರತ ಅದರ ಸದಸ್ಯ ರಾಷ್ಟ್ರ ಆಗಿರದಿದ್ದರೂ ಶೃಂಗಸಭೆಗೆ ಅತಿಥಿಯಾಗಿ ಕರೆಯಲಾಗಿದೆ. ಕೇವಲ ಭಾರತ ಮಾತ್ರವಲ್ಲ ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾಗೂ ಆಹ್ವಾನ ನೀಡಲಾಗಿದೆ. ಈ ಸಭೆಯಲ್ಲಿ ಕೊರೋನಾ ಮಹಾಮಾರಿ, ಹವಾಮಾನ ಬದಲಾವಣೆ ಮತ್ತು ಮುಕ್ತ ವ್ಯಾಪಾರ ಬಗ್ಗೆ ಚರ್ಚೆ ನಡೆಯಲಿದೆ.

-masthmagaa.com

Contact Us for Advertisement

Leave a Reply