ಬ್ಯುಸಿನೆಸ್​ ಮೀಟಿಂಗಲ್ಲಿ ಹಂದಿ ಕಥೆ ಹೇಳಿದ ಬೋರಿಸ್ ಜಾನ್ಸನ್!

masthmagaa.com:

ಲಂಡನ್: ಉದ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದ್ರಲ್ಲಿ ಯುನೈಟೆಡ್ ಕಿಂಗ್​ಡಮ್​​ ಬೋರಿಸ್ ಜಾನ್ಸನ್​​ ತಮ್ಮ ಭಾಷಣ ಕಳೆದುಕೊಂಡು ಫುಲ್ ಮುಜುಗರಕ್ಕೀಡಾಗಿದ್ದಾರೆ. ನಂತರ ಹಂದಿಯ ಕಥೆ ಹೇಳಿ ಭಾಷಣ ಮುಗಿಸಿದ್ದಾರೆ. ವೇದಿಕೆ ಮೇಲೆ ನಿಂತ ಬೋರಿಸ್ ಜಾನ್ಸನ್ ಮೊದಲಿಗೆ ಭಾಷಣದ ಪ್ರತಿಯನ್ನು ಹುಡುಕಿದ್ದಾರೆ. ಈ ವೇಳೆ ಕ್ಷಮಿಸಿ ಕ್ಷಮಿಸಿ ಅಂತ ಹೇಳ್ತಾನೇ ಇದ್ರು. ಆಮೇಲೆ ಕೊನೆಗೂ ಸಿಗಲೇ ಇಲ್ವೇನೋ..ಆಗ ಹಂದಿ ಕಥೆ ಶುರು ಮಾಡಿದ್ದಾರೆ.. ನಾನು ನಿನ್ನೆ ಪೆಪ್ಪಾ ಪಿಗ್ ಥೇಮ್ ಪಾರ್ಕ್​​​ಗೆ ಹೋಗಿದ್ದೆ. ನನಗೆ ತುಂಬಾ ಇಷ್ಟವಾಯ್ತು. ಪೆಪ್ಪಾ ಪಿಗ್​ ವರ್ಲ್ಡ್​​​ ನನಗೆ ತುಂಬಾ ಇಷ್ಟವಾದ ಜಾಗ. ಇದು ತುಂಬಾ ಸುರಕ್ಷಿತವಾದ ರಸ್ತೆಗಳನ್ನು ಹೊಂದಿದೆ. ಶಾಲೆಗಳಲ್ಲಿ ತುಂಬಾ ಶಿಸ್ತು ಇದೆ. ನೀವ್ಯಾರು ಅಲ್ಲಿಗೆ ಬಂದಿಲ್ಲ ಅಂತ ನನಗೆ ಆಶ್ಚಯವಾಗ್ತಿದೆ ಅಂತ ಹೇಳಿದ್ದಾರೆ. ಜೊತೆಗೆ ಹೇರ್​​​ ಡ್ರೈಯರ್ ಅಥವಾ ಪಿಕಾಸಿ ಮುಖದ ಈ ಹಂದಿಗಳನ್ನು ಬಿಬಿಸಿಯೇ ನಿರಾಕರಿಸಿತ್ತು. ಆದ್ರೀಗ ಅಮೆರಿಕ, ಚೀನಾ ಸೇರಿದಂತೆ ಥೀಮ್​ ಪಾರ್ಕ್​​ಗಳನ್ನು ಹೊಂದಿರೋ 180ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡ್ತಿದ್ದೀವಿ ಅಂದ್ರೆ ಯಾರು ನಂಬುತ್ತಾರೆ..? ಇದ್ರಲ್ಲಿ 600 ಕೋಟಿ ಪೌಂಡ್ಸ್​ ಮೊತ್ತದ ವ್ಯವಹಾರವಾಗಿದೆ ಅಂತ ಕೂಡ ಬೋರಿಸ್ ಜಾನ್ಸನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply