ಬ್ರಿಟನ್‌ನಲ್ಲಿ ಭಾರತೀಯ ಶಿಕ್ಷಕರಿಗೆ ಭಾರಿ ಡಿಮ್ಯಾಂಡ್‌!

masthmagaa.com:

ಬ್ರಿಟನ್‌ನಲ್ಲಿ ಭಾರತೀಯ ಶಿಕ್ಷಕರಿಗೆ ಹೆಚ್ಚಿನ ಬೇಡಿಕೆಯಿದೆ ಅಂತ ತಿಳಿದು ಬಂದಿದೆ. ಅದ್ರಲ್ಲೂ ಗಣಿತ, ವಿಜ್ಞಾನ ಹಾಗೂ ಲಾಂಗ್ವೇಜ್‌ ಶಿಕ್ಷಕರಿಗೆ ಭಾರಿ ಡಿಮ್ಯಾಂಡ್‌ ಇದೆ ಅಂತ ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. International Relocation Payments (IRP) ಯೋಜನೆಯಡಿಯಲ್ಲಿ ಈ ಸಬ್ಜೆಕ್ಟ್‌ಗಳಿಗೆ ನೂರಾರು ಶಿಕ್ಷಕರನ್ನ ನೇಮಿಸಿಕೊಳ್ಳಲು ಬ್ರಿಟನ್‌ ಸರ್ಕಾರ ಪ್ಲಾನ್‌ ಮಾಡಿದೆ ಎನ್ನಲಾಗಿದೆ. ಇನ್ನು ಶಿಕ್ಷಕರ ಸಂಖ್ಯೆಯನ್ನ ಹೆಚ್ಚಿಸುವ ಸಲುವಾಗಿ ಈ ಯೋಜನೆಯನ್ನ ಪ್ರಾರಂಭಿಸಲಾಗಿದೆ. ಅದರ ಅಡಿಯಲ್ಲಿ ಭಾರತ, ಘಾನಾ, ಸಿಂಗಾಪುರ್, ಜಮೈಕಾ, ನೈಜೀರಿಯಾ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಯಿಂದ ಗಣಿತ, ವಿಜ್ಞಾನ ಮತ್ತು ಭಾಷೆಗಳನ್ನ ಟೀಚ್‌ ಮಾಡೋಕೆ ಅರ್ಹತೆ ಇರುವ ಶಿಕ್ಷಕರನ್ನ ನೇಮಕ ಮಾಡಿಕೊಳ್ಳಲಾಗುತ್ತೆ. ಅಂದ್ಹಾಗೆ ಬ್ರಿಟನ್‌ ಶಾಲೆಗಳಲ್ಲಿ ಕೆಲಸ ಮಾಡಲು. ಪದವಿ ಸೇರಿದಂತೆ ಮಾನ್ಯತೆ ಪಡೆದ ಶಿಕ್ಷಕ ತರಬೇತಿ ಅರ್ಹತೆಗಳ ಜೊತೆಗೆ ಕನಿಷ್ಠ ಒಂದು ವರ್ಷ ಅನುಭವವನ್ನ ಹೊಂದಿರಬೇಕು. ಅಲ್ದೆ ಇಂಗ್ಲಿಷ್ ಮಾತನಾಡಲು ಬರಬೇಕು ಅಂತ ಅಲ್ಲಿನ ಶಿಕ್ಷಣ ಇಲಾಖೆ ತಿಳಿಸಿದೆ.

-masthmagaa.com

Contact Us for Advertisement

Leave a Reply