ಭದ್ರತಾ ಮಂಡಳಿಯಲ್ಲಿ ಕಿತ್ತಾಡಿದ ಅಮೆರಿಕ-ರಷ್ಯಾ!

masthmagaa.com:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ಅಧಿವೇಶನದಲ್ಲಿ ಯುಕ್ರೇನ್​ ವಿಚಾರವಾಗಿ ಅಮೆರಿಕ ಮತ್ತು ರಷ್ಯಾ ಪರಸ್ಪರ ಕಿತ್ತಾಡಿವೆ. ರಷ್ಯಾ ಏನಾದ್ರೂ ಯುಕ್ರೇನ್​ ಮೇಲೆ ಆಕ್ರಮಣ ಮಾಡಿದ್ರೆ ಭಯಾನಕ ಪರಿಣಾಮಗಳನ್ನ ಎದುರಿಸಬೇಕಾಗುತ್ತೆ ಅಂತ ಅಮೆರಿಕ ಎಚ್ಚರಿಸಿದೆ. ಮತ್ತೊಂದುಕಡೆ ರಷ್ಯಾ, ನಾವೇನು ಯುಕ್ರೇನ್​ ಮೇಲೆ ಆಕ್ರಮಣ ಮಾಡಲ್ಲ. ಆದ್ರೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳೇ ಸುಖಾಸುಮ್ಮನೆ ಯುದ್ಧದ ಬೆದರಿಕೆ ಒಡ್ಡುತ್ತಿದ್ದಾರೆ. ಒಂದ್ವೇಳೆ ಈಗಿರೋ ಶಾಂತಿ ಒಪ್ಪಂದಗಳನ್ನ ಯುಕ್ರೇನ್​ ಮುರಿದ್ರೆ, ಯುಕ್ರೇನ್​ನ ವಿನಾಶಕ್ಕೇ ಯುಕ್ರೇನೇ ಕಾರಣವಾಗಲಿದೆ ಅಂತ ರಷ್ಯಾ ಹೇಳಿದೆ.
– ಇದರ ನಡುವೆ ಯುಕೆ ಪ್ರಧಾನಿ ಬೋರಿಸ್​ ಜಾನ್ಸನ್ ಯುಕ್ರೇನ್​ಗೆ ಬಂದಿಳಿದಿದ್ದಾರೆ. ಬಂದವರೇ, ರಷ್ಯಾ ತನ್ನ ಸೇನೆಯನ್ನ ಹಿಂದಕ್ಕೆ ತೆಗೆದುಕೊಳ್ಳಬೇಕು. ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆ ಬಗೆಹರಿಸಬೇಕು. ಈ ಮೂಲಕ ಮತ್ತಷ್ಟು ರಕ್ತಪಾತವನ್ನ ತಪ್ಪಿಸಬೇಕು ಅಂತ ಆಗ್ರಹಿಸಿದ್ದಾರೆ. ಜೊತೆಗೆ ಯುಕ್ರೇನ್​ನ ಸಾರ್ವಭೌಮತ್ವವನ್ನ ಎತ್ತಿ ಹಿಡಿಯೋದನ್ನ ಮುಂದುವರಿಸುತ್ತೆ ಎಂದಿದ್ದಾರೆ.

– ಯುಕ್ರೇನ್‌ ಬಿಕ್ಕಟ್ಟಿನ ಬಗ್ಗೆ ಅಮೆರಿಕ ಜೊತೆಗಿನ ರಾಜತಾಂತ್ರಿಕ ಮಾತುಕತೆಗೂ ಮುನ್ನ ರಷ್ಯಾ, ತನ್ನ ನಿಲುವನ್ನು ಪತ್ರದ ಮೂಲಕ ಬೈಡೆನ್​ ಸರ್ಕಾರಕ್ಕೆ ತಿಳಿಸಿದೆ. ಕಳೆದ ವಾರ ಅಮೆರಿಕ ಕಳಿಸಿದ ಪತ್ರಕ್ಕೆ ಇದು ಪ್ರತ್ಯುತ್ತರವಾಗಿದ್ದು, ಪತ್ರದಲ್ಲಿ ಏನಿದೆ ಎಂಬ ವಿವರಗಳನ್ನ ಅಧಿಕಾರಿಗಳು ಬಹಿರಂಗಪಡಿಸಿಲ್ಲ.

– ರಷ್ಯಾದಿಂದ ಯುಕ್ರೇನ್‌ಗೆ ಇರುವ ಆತಂಕಗಳನ್ನು ವ್ಯಕ್ತಪಡಿಸಿದ ಅಮೇರಿಕ ಅಧ್ಯಕ್ಷ ಜೋ ಬೈಡೆನ್‌ ‘ಸಮಸ್ಯೆಯನ್ನ ಬಗೆಹರಿಸಲು ರಾಜತಾಂತ್ರಿಕ ಮಾರ್ಗವೇ ಉತ್ತಮ ಅಂತ ನಾವು ಈಗಲೂ ಹೇಳುತ್ತೇವೆ. ಆದ್ರೆ ಬೇರೆ ಏನೇ ಆದರೂ ಅದಕ್ಕೆ ನಾವು ಸಿದ್ಧರಿದ್ದೇವೆ‘ ಅಂತ ಹೇಳಿದ್ದಾರೆ.

– ರಷ್ಯಾ ಒಂದುವೇಳೆ ಯುಕ್ರೇನ್‌ ಮೇಲೆ ದಾಳಿ ಮಾಡಿದ್ರೆ ವ್ಯಯಕ್ತಿಕವಾಗಿ ಪುಟಿನ್​ರನ್ನೇ ಟಾರ್ಗೆಟ್‌ ಮಾಡಲಾಗುತ್ತೆ ಅಂತ ಹೇಳಿದ್ದ ಅಮೆರಿಕ ಈಗ ರಷ್ಯಾ ಅಧ್ಯಕ್ಷರ ‘ಆಂತರಿಕ ವಲಯʼವನ್ನ ಕೂಡ ಟಾರ್ಗೆಟ್‌ ಮಾಡಲಾಗುವು ಎಂದಿದೆ.

-masthmagaa.com

Contact Us for Advertisement

Leave a Reply