ಯುದ್ದದ ಮಧ್ಯೆ ಸರ್ಕಾರ ಬದಲಾಯಿಸೋಕೆ ಹೊರಟ ಯುಕ್ರೇನ್‌ ಅಧ್ಯಕ್ಷ! ಯಾಕೆ?

masthmagaa.com:

ಯುಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದಾಗಿನಿಂದ ಇದೇ ಮೊದಲ ಬಾರಿಗೆ, ಭ್ರಷ್ಟಾಚಾರದ ವಿರುದ್ಧ ಶಿಸ್ತುಕ್ರಮದ ಭಾಗವಾಗಿ ಸರ್ಕಾರ ಮತ್ತು ಭದ್ರತಾ ಸೇವೆಗಳಲ್ಲಿ ಬದಲಾವಣೆ ಮಾಡೋದಾಗಿ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಮಾತಾಡಿದ ಝೆಲೆನ್ಸ್ಕಿ, ಸರ್ಕಾರದಲ್ಲಿ, ಕಾನೂನು ವ್ಯವಸ್ಥೆಯಲ್ಲಿ ವಿವಿಧ ಹಂತದ ಅಧಿಕಾರಿಗಳನ್ನ ಬದಲಾಯಿಸಲಾಗುವುದು. ಸರ್ಕಾರಿ ಅಧಿಕಾರಿಗಳು ವೈಯಕ್ತಿಕ ವಿದೇಶಿ ಪ್ರವಾಸ ಮಾಡದಂತೆ ನಿಷೇಧಿಸಲಾಗುತ್ತೆ ಅಂತ ಅನೌನ್ಸ್‌ ಮಾಡಿದ್ದಾರೆ. ಆದ್ರೆ ಯಾವುದೇ ಅಧಿಕಾರಿಯ ಹೆಸರನ್ನ ಉಲ್ಲೇಖಿಸಿಲ್ಲ.ಅಂದ್ಹಾಗೆ 2019ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಮಯದಲ್ಲಿ ಸರ್ಕಾರದಲ್ಲಿ ಸುಧಾರಣೆ ತಂದು, ಭ್ರಷ್ಟಾಚಾರವನ್ನ ತೊಡೆದು ಹಾಕೋದಾಗಿ ಝೆಲೆನ್ಸ್ಕಿ ಪ್ರಾಮಿಸ್‌ ಮಾಡಿದ್ರು. ಆದ್ರೆ ರಷ್ಯಾ ಜೊತೆಗಿನ ಸಂಘರ್ಷದಿಂದ ಅಥವಾ ಸಂಘರ್ಷದ ವಾತವರಣದಿಂದ ಯಾವುದೇ ಕೆಲಸ ಆಗಿರಲಿಲ್ಲ. ಅದ್ರಲ್ಲೂ ಇತ್ತೀಚೆಗೆ ಭ್ರಷ್ಟಾಚಾರದ ಪ್ರಕರಣಗಳ ಆರೋಪಗಳು ತೀವ್ರವಾಗಿ ಕೇಳಿ ಬಂದಿರೊ ಹಿನ್ನಲೆ ಝೆಲೆನ್ಸ್ಕಿ ಕೆಲಸ ಆರಂಭಿಸಿದ್ದಾರೆ. ಅಂದಹಾಗೆ 2021ರ Transparency International’s Corruption Perceptions Indexನಲ್ಲಿ ಒಟ್ಟು 180 ದೇಶಗಳಲ್ಲಿ ಯುಕ್ರೇನ್‌ 122ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply