ಅನರ್ಹ ಶಾಸಕರ ತಲೆಗೆ ಹುಳ ಬಿಟ್ಟ ಉಮೇಶ್ ಕತ್ತಿ..!

ಬಿಜೆಪಿ ಶಾಸಕ ಉಮೇಶ್ ಕತ್ತಿ ಅನರ್ಹ ಶಾಸಕರಿಗೆ ಹೊಸ ಟೆನ್ಶನ್ ಕೊಟ್ಟಿದ್ದಾರೆ. ಉಪಚುನಾವಣೆ ನಡೆಯೋ ಮೂರು ಕ್ಷೇತ್ರಗಳ ಪೈಕಿ ಬಿಜೆಪಿಯರಿಗೇ ಬಿಜೆಪಿ ಟಿಕೆಟ್ ಸಿಗೋದು ಪಕ್ಕಾ ಎಂದಿದ್ದಾರೆ. ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ್ ಸವದಿಗೆ, ಗೋಕಾಕ್‍ನಲ್ಲಿ ಅಶೋಕ್ ಪೂಜಾರಿಗೆ, ಕಾಗವಾಡ ಕ್ಷೇತ್ರದಲ್ಲಿ ರಾಜು ಕಾಗೆಗೆ ಟಿಕೆಟ್ ಪಕ್ಕಾ ಎಂದಿದ್ದಾರೆ. ಈ ಮೂಲಕ ಅಥಣಿಯ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ, ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಮತ್ತು ಗೋಕಾಕ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿಗೆ ಶಾಕ್ ಕೊಟ್ಟಿದ್ದಾರೆ. ಇನ್ನು ಸರ್ಕಾರದಲ್ಲಿ 24 ಸಚಿವರು ಇರಬೇಕು. ಆದ್ರೆ ಈಗ ಇರೋದು ಬರೀ 17 ಜನ. ಹೀಗಾಗಿ ಮುಂದೆ ನನಗೂ ಸಚಿವ ಸ್ಥಾನ ಸಿಗಬಹುದು. ಕಾದು ನೋಡೋಣ ಅಂದ್ರು.

Contact Us for Advertisement

Leave a Reply