ದೇಶದಲ್ಲಿ ಆರ್ಥಿಕ ದುಸ್ಥಿತಿ ಇಲ್ಲ: ರವಿಶಂಕರ್ ಪ್ರಸಾದ್

ದೇಶದಲ್ಲೆಡೆ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಅಂಗಡಿಗಳಲ್ಲಿ ವ್ಯಾಪಾರ ಆಗ್ತಿಲ್ಲ, ವಾಹನಗಳ ಕ್ಷೇತ್ರದಲ್ಲಂತೂ ಭಾರಿ ಹಿನ್ನೆಡೆಯಾಗುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಇಂಥಾ ಟೈಮಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಒಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಆರ್ಥಿಕ ವ್ಯವಸ್ಥೆಯನ್ನು ನೇರವಾಗಿ ಸಿನಿಮಾ ಜೊತೆ ಜೋಡಿಸಿರೋ ಸಚಿವರು, ಅಕ್ಟೋಬರ್ 2ರಂದು 3 ಸಿನಿಮಾಗಳು 120 ಕೋಟಿ ರೂಪಾಯಿ ಗಳಿಸಿವೆ. ದೇಶದಲ್ಲಿ ಆರ್ಥಿಕ ಹಿಂಜರಿತ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮೊಬೈಲ್, ಮೆಟ್ರೋ, ರಸ್ತೆಗಳ ನಿರ್ಮಾಣವಾಗುತ್ತಿದೆ. ಇದರಿಂದ ಜನರಿಗೆ ಕೆಲಸ ಸಿಗುತ್ತಿದೆ. ನಮ್ಮ ಅರ್ಥವ್ಯವಸ್ಥೆ ಸದೃಢವಾಗಿದ್ದು, ಹಣದುಬ್ಬರದ ಮೇಲೆ ನಿಯಂತ್ರಣ ಸಾಧಿಸಲಾಗಿದೆ. ದೇಶದಲ್ಲಿ ಯಾವುದೇ ರೀತಿಯ ಆರ್ಥಿಕ ಹಿಂಜರಿತ ಇಲ್ಲ ಅಂತ ಹೇಳಿದ್ರು. ದೇಶದಲ್ಲಿ ಮೊಬೈಲ್ ತಯಾರಿಸುವ 268 ಫ್ಯಾಕ್ಟರಿಗಳಿವೆ. ಮೆಟ್ರೋ ನಿರ್ಮಾಣ ಕಾರ್ಯ ನಡೀತಿದೆ. ಜನರ ಬಳಿ ಕೆಲಸ ಇದೆ. ಹೀಗಿರುವಾಗ ದೇಶದಲ್ಲಿ ಆರ್ಥಿಕ ದುಸ್ಥಿತಿ ಎಲ್ಲಿದೆ ಅಂತ ಪ್ರಶ್ನಿಸಿದ್ರು.

Contact Us for Advertisement

Leave a Reply