ಮೋದಿ ಸರ್ಕಾರದ ಸಚಿವನ ಮೇಲೆ ಇಂಕ್ ದಾಳಿ..!

ಬಿಹಾರ ರಾಜಧಾನಿ ಪಾಟ್ನಾದಲ್ಲಿ ಕೇಂದ್ರ ಸಚಿವ ಅಶ್ವಿನಿ ಚೌಬೆ ಮೇಲೆ ಇಂಕ್ ಎಸೆಯಲಾಗಿದೆ. ಅಶ್ವಿನಿ ಚೌಬೆ ಇವತ್ತು ಪಾಟ್ನಾ ಮೆಡಿಕಲ್ & ಹಾಸ್ಪಿಟಲ್​​​​​​​​​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡೆಂಗ್ಯೂ ಪೀಡಿತರನ್ನು ಭೇಟಿಯಾಗಲು ಆಗಮಿಸಿದ್ರು. ಆಸ್ಪತ್ರೆಯೊಳಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿ, ಹೊರಬಂದಾಗ ಕೆಲವು ವಿದ್ಯಾರ್ಥಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಘೋಷಣೆ ಕೂಗಿದ್ರು. ಅಲ್ಲದೆ ಓರ್ವ ವಿದ್ಯಾರ್ಥಿ ಸಚಿವರ ಮೇಲೆ ಇಂಕ್ ಎಸೆದು, ಸ್ಥಳದಿಂದ ಓಡಿಹೋಗಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿ ಹಿಡಿಯಲು ಯತ್ನಿಸಿದರಾದ್ರೂ ಅದು ಸಾಧ್ಯವಾಗಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಶ್ವಿನಿ ಚೌಬೆ, ಫೇಮಸ್ ಆಗೋಕೆ, ರಾಜಕಾರಣಿಯಾಗುವ ಹುಚ್ಚಿನಿಂದ ಹೀಗೆಲ್ಲಾ ಮಾಡ್ತಿದ್ದಾರೆ. ಅವರು ನನ್ನ ಮೇಲೆ ಇಂಕ್ ಎಸೆದಿಲ್ಲ. ಜನರ ಮೇಲೆ, ಪ್ರಜಾಪ್ರಭುತ್ವದ ಮೇಲೆ, ಪ್ರಜಾಪ್ರಭುತ್ವದ ಆಧಾರ ಸ್ಥಂಭದ ಮೇಲೆ ಇಂಕ್ ಎಸೆದಿದ್ದಾರೆ ಎಂದು ಕೆಂಡಕಾರಿ, ಅಲ್ಲಿಂದ ಹೊರಟು ಹೋದ್ರು.

Contact Us for Advertisement

Leave a Reply