ಮಹಿಳೆಯ ಹೊಟ್ಟೆಯಲ್ಲಿ ಟವೆಲ್‌ ಮರೆತು ಬಿಟ್ಟ ವೈದ್ಯ!ಮುಂದೇನಾಯ್ತು?

masthmagaa.com:

ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಆಪರೇಷನ್‌ ಮಾಡಿದ ವೈದ್ಯರೊಬ್ರು ಆಕೆಯ ಹೊಟ್ಟೆಯಲ್ಲಿ ಟವೆಲ್‌ ಮರೆತು ಬಿಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ನಜ್ರಾನಾ ಅನ್ನೋ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯುಪಿಯ ಅಮ್ರೋಹಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಆಪರೇಷನ್‌ ಮಾಡಿದ ವೈದ್ಯರು ಟವೆಲ್‌ ಮರೆತು ಹೊಟ್ಟೆಯಲ್ಲೇ ಬಿಟ್ಟಿದ್ದಾರೆ. ನಜ್ರಾನಾ ಮನೆಗೆ ಬಂದ ನಂತ್ರ ಹೊಟ್ಟೆ ನೋವು ಕಡಿಮೆಯಾಗದ ಕಾರಣ ಮತ್ತೊಂದು ಆಸ್ಪತ್ರೆಗೆ ಹೋದಾಗ ಅಲ್ಲಿ ಹೊಟ್ಟೆಯಲ್ಲಿ ಟವೆಲ್‌ ಇರೋದು ಕಂಡು ಬಂದಿದೆ. ಈ ಕೇಸ್‌ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ ಅಂತ ಅಲ್ಲಿನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply