ಲಖೀಂಪುರ ಘಟನೆ ಮರುಸೃಷ್ಟಿಗೆ ಮುಂದಾದ SIT

masthmagaa.com:

ಉತ್ತರ ಪ್ರದೇಶದ ಲಖೀಂಪುರ ಖೇರಿ ಹಿಂಸಾಚಾರ ಸಂಬಂಧ ತನಿಖೆ ನಡೆಸ್ತಿರೋ SIT ಕ್ರೈಮ್ ಸೀನ್ ರಿ-ಕ್ರಿಯೇಟ್ ಮಾಡುವ ನಿರ್ಧಾರ ಮಾಡಿದೆ. ಇದೊಂದು ಫೊರೆನ್ಸಿಕ್ ಸೈನ್ಸ್ ವಿಧಾನ. ಅಪರಾಧಗಳ ತನಿಖೆಯಲ್ಲಿ ತುಂಬಾ ಬಳಕೆಯಾಗುತ್ತೆ. ಘಟನೆ ಹೇಗೆ ನಡೀತು ಅನ್ನೋದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಲು, ಹಾಗೂ ಆರೋಪಿಗಳಿಂದ ಸರಿಯಾದ ರೀತಿಯಲ್ಲಿ ಮಾಹಿತಿ ಹೊರಬರುವಂತೆ ಮಾಡಲು ಇದನ್ನ ಮಾಡಲಾಗುತ್ತೆ. ಘಟನಾ ಸ್ಥಳಕ್ಕೇ ಆರೋಪಿಗಳನ್ನ ಕರೆದುಕೊಂಡು ಹೋಗಿ, ಆ ಘಟನೆ ಹಂತ ಹಂತವಾಗಿ ಹೇಗೆ ಆಯ್ತು ಅನ್ನೋದನ್ನ ಪುನರ್ನಿರ್ಮಾಣ ಮಾಡಲಾಗುತ್ತೆ. ಈಗ ಲಖೀಂಪುರ ಖೇರಿ ಹಿಂಸಾಚಾರ ಸಂಬಂಧ ಕೂಡ ಅಷ್ಟೆ. ಕೇಂದ್ರಸ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಸೇರಿ ಪ್ರಮುಖ ಆರೋಪಿಗಳನ್ನ ಸ್ಥಳಕ್ಕೇ ಕರ್ಕೊಂಡು ಹೋಗಿ ಕ್ರೈಮ್ ಸೀನ್ ರಿ-ಕ್ರಿಯೇಟ್ ಮಾಡ್ತಾರೆ.

-masthmagaa.com

Contact Us for Advertisement

Leave a Reply