30 ವರ್ಷ ಹಳೆಯ ಭ್ರೂಣಗಳಿಂದ ಅವಳಿ ಮಕ್ಕಳ ಜನನ! ಅದ್ಹೇಗೆ?

masthmagaa.com:

ಕಳೆದ 30 ವರ್ಷದಿಂದ ಸಂರಕ್ಷಿಸಲಾಗಿದ್ದ ಭ್ರೂಣಗಳಿಂದ ಅವಳಿ ಮಕ್ಕಳು ಜನಿಸಿದ್ದಾರೆ. ಅಮೆರಿಕದಲ್ಲಿಈ ಅಪರೂಪದ ಘಟನೆ ನಡೆದಿದೆ. ಏಪ್ರಿಲ್‌ 22, 1992ರಲ್ಲಿ ದಂಪತಿಯೊಂದು ಇಲ್ಲಿನ ರಾಷ್ಟ್ರೀಯ ಭ್ರೂಣ ದಾನ ಕೇಂದ್ರಕ್ಕೆ ಭ್ರೂಣಗಳನ್ನ ದಾನ ಮಾಡಿದ್ದರು. ನಂತ್ರ ಅದನ್ನ ಸೊನ್ನೆಗಿಂತ ಕಡಿಮೆ -200 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನದಲ್ಲಿ ಇಟ್ಟು ಫ್ರೀಜ್‌ ಮಾಡಿ ಇಡಲಾಗಿತ್ತು. ಅದಾದ ಮೇಲೆ ಈ ಭ್ರೂಣಗಳನ್ನ ವ್ಯಕ್ತಿಯೊಬ್ಬರು ದಾನ ಪಡೆದಿದ್ರು, ಈಗ ಒಂದು ಗಂಡು ಮತ್ತು ಹೆಣ್ಣು ಮಗುವಿನ ಜನನವಾಗಿದೆ. ಈ ಮಕ್ಕಳಿಗೆ ಲಿಡಿಯಾ ಮತ್ತು ಟಿಮೊಥಿ ಅಂತ ಹೆಸರಿಡಲಾಗಿದೆ. ಅಂದ್ರೆ ಈ ಮಕ್ಕಳು ಮೂವತ್ತು ವರ್ಷದ ನಂತರ ಟ್ಟೈಂ ಟ್ರಾವೆಲ್‌ ಎಲ್ಲಾ ಮಾಡ್ಕೊಂಡು ಹುಟ್ಟಿದ್ದಾರೆ. ಮೂವತ್ತು ವರ್ಷದ ಹಿಂದೆನೇ ಈ ಜನನ ವಾಗಿದ್ರೆ ಬಹುಶಃ ಈಗ ಈ ಮಕ್ಕಳಿಗೂ ಮಕ್ಕಳರ್ತಿದ್ರೋ ಏನೋ?.. ಕೊನೆಗೂ ಭೂಮಿ ಮೇಲೆ ಬದುಕುವ ತಮ್ಮ ಆಸೆಯನ್ನ ಮೂವತ್ತು ವರ್ಷದ ನಂತರ ಈಡೇರಿಸಿಕೊಂಡಿವೆ. ಅಂದ್ಹಾಗೆ ಇದಕ್ಕೂ ಮೊದಲು 2020ರಲ್ಲಿ 27 ವರ್ಷ ಹಳೆಯ ಭ್ರೂಣದಿಂದ ಮಗು ಜನಿಸಿದ್ದ ದಾಖಲೆಯನ್ನು ಈ ನೂತನ ಅವಳಿ ಮಕ್ಕಳು ಅಳಿಸಿ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply