ಬೈಡೆನ್ ಭೇಟಿ ವೇಳೆ ಉಭಯದೇಶಗಳ ಸಂಬಂಧ ಸುಧಾರಿಸುತ್ತೆ: ಫ್ರಾನ್ಸ್​​

masthmagaa.com:

ಇಟಲಿಯ ರೋಮ್​ನಲ್ಲಿ ನಡೆಯಲಿರೋ ಜಿ-20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿಯಾಗೋದಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ. ಆಸ್ಟ್ರೇಲಿಯಾ ಫ್ರಾನ್ಸ್ ಜೊತೆ ಮಾಡಿಕೊಂಡಿದ್ದ ಒಪ್ಪಂದ ಕಟ್ ಮಾಡ್ಕೊಂಡು ಅಮೆರಿಕ ಜೊತೆ ಸಬ್​ಮರೀನ್ ಒಪ್ಪಂದ ಮಾಡ್ಕೊಂಡ್ಮೇಲೆ ಫ್ರಾನ್ಸ್ ಕೆಂಡಾಮಂಡಲವಾಗಿತ್ತು. ಉಭಯದೇಶಗಳ ನಡುವಿನ ಸಂಬಂಧದಲ್ಲಿ ಹುಳಿ ಹಿಂಡಿದಂತಾಗಿತ್ತು. ಆದ್ರೆ ಅಕ್ಟೋಬರ್ 30-31ರಂದು ನಡೆಯಲಿರೋ ಜಿ20 ಶೃಂಗಸಭೆ ವೇಳೆ ಭೇಟಿಯಾದಾಗ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ವಿಶ್ವಾಸ ಇದೆ ಅಂತ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply