ಯುಕ್ರೇನ್ ಮೇಲೆ ಯುದ್ಧ ಮಾಡುತ್ತಾ ರಷ್ಯಾ?

masthmagaa.com:

ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವೆ ಯುದ್ಧ ನಡೆಯಲಿದೆ ಅಂತ ಮಿಲಿಟರಿ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಯುಕ್ರೇನ್ ವಿಚಾರವಾಗಿ ರಷ್ಯಾ ಮತ್ತು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ನಡುವಿನ ಸಂಬಂಧ ದಿನೇ ದಿನೇ ಹಳಸುತ್ತಿದೆ. ಹೀಗಾಗಿ ಈ ಯುದ್ಧವನ್ನು ತಡೆಯಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಅಂತ ತಜ್ಞರು ಎಚ್ಚರಿಸಿದ್ದಾರೆ. ಅಮೆರಿಕದ ಗುಪ್ತಚರ ಸಂಸ್ಥೆಗಳ ಪ್ರಕಾರ, ರಷ್ಯಾ, ಗಡಿಭಾಗದಲ್ಲಿ ಸೇನೆ ನಿಯೋಜನೆಯನ್ನು ಮುಂದುವರಿಸಿದೆ. ಮುಂದಿನ ವರ್ಷ ಆರಂಭದಲ್ಲಿ ಯುಕ್ರೇನ್ ಮೇಲೆ ಮುಗಿಬೀಳಲು ರಷ್ಯಾ ಅಧ್ಯಕ್ಷ ಪುಟಿನ್ ಎಲ್ಲಾ ರೀತಿಯ ಪ್ಲಾನ್ ಮಾಡ್ಕೊಳ್ತಿದ್ದಾರೆ. ಇತ್ತೀಚೆಗಷ್ಟೇ ಪುಟಿನ್​​ ನ್ಯಾಟೋ ರೆಡ್​ಲೈನ್ ಕ್ರಾಸ್ ಮಾಡ್ತಿದೆ ಅಂತ ಆರೋಪಿಸಿದ್ರು. ಅದ್ರ ಬೆನ್ನಲ್ಲೇ ಈ ಮಹತ್ವದ ವಿಚಾರ VANNA ಅಮೆರಿಕದ ಗುಪ್ತಚರ ಸಂಸ್ಥೆ ಹೊರಹಾಕಿದೆ.

ಮತ್ತೊಂದ್ಕಡೆ ಯುಕ್ರೇನ್​ ಸೇನಾಧಿಕಾರಿ ಕೈರಿಲೋ ಬುಡನೋವ್ ಕೂಡ ಯುದ್ಧದ ಎಚ್ಚರಿಕೆ ನೀಡಿದ್ದಾರೆ. ರಷ್ಯಾ ಗಡಿಭಾಗಕ್ಕೆ 92 ಸಾವಿರ ಯೋಧರನ್ನು ನಿಯೋಜಿಸಿದೆ. ಜೊತೆಗೆ ಗಡಿಯಲ್ಲಿ ಟ್ಯಾಂಕರ್​, ಆರ್ಟಿಲರಿ, ಕ್ಷಿಪಣಿ ವ್ಯವಸ್ಥೆ ಮತ್ತು ಯುದ್ಧನೌಕೆಗಳನ್ನ ನಿಯೋಜಿಸಿದೆ. ಮುಂದಿನ ವರ್ಷದ ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಯುಕ್ರೇನ್ ಮೇಲೆ ದಾಳಿ ನಡೆಸೋ ಸಾಧ್ಯತೆ ಇದೆ ಅಂತ ಎಚ್ಚರಿಸಿದ್ದಾರೆ. ಆದ್ರೆ ರಷ್ಯಾ.. ಯುಕ್ರೇನಿಯನ್ ಜನರಲ್ ಕೈರಿಲೋ ಬುಡನೋವ್ ಆರೋಪವನ್ನು ನಿರಾಕರಿಸಿದೆ. ಜೊತೆಗೆ ಯುಕ್ರೇನ್​​ಗೆ ಪಾಶ್ಚಿಮಾತ್ಯ ದೇಶಗಳು ದೊಡ್ಡಮಟ್ಟದಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸ್ತಿವೆ. ಹೀಗಾಗಿ ಯುಕ್ರೇನ್​ ಗಡಿಭಾಗದಲ್ಲಿ ತನ್ನ ಸೇನೆಯನ್ನು ಗಟ್ಟಿ ಮಾಡ್ತಿದೆ ಅಂತ ಆರೋಪಿಸಿದೆ. ಇವೆಲ್ಲದ್ರ ನಡುವೆಯೇ ರಷ್ಯಾಗೆ ಮೆಸೇಜ್ ನೀಡಲು ಯುಕ್ರೇನ್​​ ದೊಡ್ಡ ಮಟ್ಟದಲ್ಲಿ ಮಿಲಿಟರಿ ಸಮರಾಭ್ಯಾಸ ನಡೆಸಿದೆ.

-masthmagaa.com

Contact Us for Advertisement

Leave a Reply