ಜಪಾನ್‌-ಅಮೆರಿಕಾ ಜಂಟಿ ಸೇನಾಭ್ಯಾಸ ! ಉತ್ತರ ಕೊರಿಯಾಗೆ ಎಚ್ಚರಿಕೆ!

masthmagaa.com:

ಉತ್ತರ ಕೊರಿಯಾ ಜಪಾನ್‌ ಸಮುದ್ರದ ಮೇಲೆ ಕ್ಷಿಪಣಿ ಲಾಂಚ್‌ ಮಾಡಿದ ಬೆನ್ನಲ್ಲೇ ಜಪಾನ್‌ ಮತ್ತು ಅಮೆರಿಕ ಜಂಟಿ ಸೇನಾಭ್ಯಾಸ ನಡೆಸಿರೋದಾಗಿ ಜಪಾನ್‌ ಅಧಿಕಾರಿಗಳು ಹೇಳಿದ್ದಾರೆ. ಜಪಾನ್‌ ಸಮುದ್ರದ ವಾಯು ಪ್ರದೇಶದಲ್ಲಿ ಸೇನಾ ಅಭ್ಯಾಸ ಮಾಡೋ ಮೂಲಕ ಉತ್ತರ ಕೊರಿಯಾಗೆ ಶಕ್ತಿ ಪ್ರದರ್ಶನ ಮಾಡೋಕೆ ಅಮೆರಿಕ-ಜಪಾನ್‌ ಮುಂದಾಗಿವೆ ಎನ್ನಲಾಗಿದೆ. ಈ ದ್ವಿಪಕ್ಷೀಯ ವ್ಯಾಯಾಮದಿಂದ ಉಭಯ ದೇಶಗಳು ಯಾವುದೇ ಪರಿಸ್ಥಿತಿಗೆ ಸರಿಯಾದ ಪ್ರತಿಕ್ರಿಯೆ ನೀಡೋಕೆ ರೆಡಿ ಇವೆ ಅನ್ನೋದ್ನ ತಿಳಿಸುತ್ತೆ ಅಂತ ಜಪಾನ್‌ ಹೇಳಿದೆ. ಈ ವ್ಯಾಯಾಮದಲ್ಲಿ ಸುಮಾರು 55 ಸಾವಿರ ಅಮೆರಿಕ ಸೈನಿಕರು ಭಾಗವಹಿಸಿದ್ದಾರೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಇತ್ತ ಉತ್ತರ ಕೊರಿಯಾ ತನ್ನ ಹೊಸ ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್‌ ಮಿಸೈಲ್‌ ಹ್ವಾಸಾಂಗ್‌-17 ಅನ್ನ ಪರೀಕ್ಷಿಸಿದೆ. ಈ ವೇಳೆ ಅಮೆರಿಕದ ನ್ಯೂಕ್ಲಿಯರ್‌ ದಾಳಿ ಬೆದರಿಕೆಗೆ ನಾವು ಕೂಡ ನ್ಯೂಕ್ಲಿಯರ್‌ ವೆಪನ್ಸ್‌ ಬಳಸಿ ತಕ್ಕ ಉತ್ತರ ಕೊಡ್ತೇವೆ ಅಂತ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಎಚ್ಚರಿಸಿದ್ದಾರೆ. ಇನ್ನು ಕಿಮ್‌ ಜಾಂಗ್‌ ಉನ್‌ನ ಮಗಳು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾಳೆ. ಮಿಸೈಲ್‌ ಲಾಂಚ್‌ ವೇಳೆ ತಂದೆಯ ಜೊತೆ ಕಾಣಿಸಿಕೊಂಡ ಫೋಟೊಗಳನ್ನ ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

-masthmagaa.com

Contact Us for Advertisement

Leave a Reply