ರಷ್ಯಾ ಪರ ನಿಂತರ ಭಾರತಕ್ಕೆ ಅಮೆರಿಕ ಪೆಟ್ಟು!

masthmagaa.com:

ಯುಕ್ರೇನ್- ರಷ್ಯಾ ಸಂಘರ್ಷದಲ್ಲಿ ತಟಸ್ಥವಾಗಿ ಒಂದು ಅರ್ಥದಲ್ಲಿ ರಷ್ಯಾ ಪರವಾಗಿ ನಿಂತ ಭಾರತಕ್ಕೆ ಅಮೆರಿಕ ಪೆಟ್ಟು ಕೊಡುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಅದ್ರಲ್ಲೂ ವಿಶೇಷವಾಗಿ ಅಮೆರಿಕದ ಒತ್ತಡದ ಬಳಿಕವೂ ಎಸ್​​-400 ಕ್ಷಿಪಣಿ ವ್ಯವಸ್ಥೆ ಖರೀದಿ ಸಂಬಂಧ ಡೀಲ್ ಮಾಡ್ಕೊಂಡಿರೋ ಭಾರತದ ಮೇಲೆ ನಿರ್ಬಂಧಗಳನ್ನು ಹೇರಬಹುದು ಅಂತ ಚರ್ಚಿಸಲಾಗ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕ ರಾಜತಾಂತ್ರಿಕ ಅಧಿಕಾ ಡೊನಾಲ್ಡ್​ ಲು, ಭಾರತದ ಮೇಲೆ ನಿರ್ಬಂಧಗಳನ್ನು ಹೇರಬೇಕಾ ಅಥವಾ ಬೇಡ್ವಾ ಅನ್ನೋದ್ರ ಬಗ್ಗೆ ಬೈಡೆನ್ ಸರ್ಕಾರ ಚಿಂತನೆ ನಡೆಸ್ತಿದೆ. ಆದ್ರೂ ಕೂಡ ಭಾರತ ಈಗ ಅಮೆರಿಕಗೆ ಭದ್ರತೆ ವಿಚಾರದಲ್ಲಿ ಅತಿದೊಡ್ಡ ಪಾಲುದಾರ ದೇಶ.. ಈ ಸಂಬಂಧವನ್ನು ನಾವು ಮುಂದುವರಿಸಲು ಬಯಸ್ತೀವಿ ಅಂತ ಕೂಡ ಹೇಳಿದ್ದಾರೆ.. ಅಂದಹಾಗೆ ವಿಶ್ವಸಂಸ್ಥೆಯಲ್ಲಿ ಪದೇ ಪದೇ ಗೈರಾಗ್ತಿರೋ, ತಟಸ್ಥ ನೀತಿ ತೋರಿಸ್ತಿರೋ ಭಾರತದ ವಿರುದ್ಧ ಅಮೆರಿಕದಲ್ಲಿ ರಿಪಬ್ಲಿಕನ್ ಮತ್ತು ಡೆಮ್ರಾಕ್ರಟಿಕ್ ಎರಡೂ ಪಕ್ಷದಿಂದ ವಿರೋಧ ವ್ಯಕ್ತವಾಗ್ತಿದೆ.

-masthmagaa.com

Contact Us for Advertisement

Leave a Reply