ಬೈಡನ್‌ ಭೇಟಿ ವೇಳೆ ಕಿಮ್‌ ಪರಮಾಣು ಪರೀಕ್ಷೆ?

masthmagaa.com:

ಜೋ ಬೈಡನ್‌ ದಕ್ಷಿಣ ಕೊರಿಯಾ, ಜಪಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಉತ್ತರ ಕೊರಿಯಾ ನ್ಯೂಕ್ಲಿಯರ್‌ ಟೆಸ್ಟ್‌ ಅಥ್ವಾ ಪರಮಾಣು ಪರೀಕ್ಷೆ ಮಾಡ್ಬಹುದು ಅಂತ ದಕ್ಷಿಣ ಕೊರಿಯಾದ ಸಂಸದರೊಬ್ರು ಹೇಳಿದ್ದಾರೆ. ಉತ್ತರ ಕೊರಿಯಾ ಪರಮಾಣು ಪರೀಕ್ಷೆಯ ಸಿದ್ದತೆಗಳನ್ನೆಲ್ಲ ಮುಗಿಸ್ಕೊಂಡಿದೆ. ಇನ್ನೇನಿದ್ರು ಅವ್ರು ಸರಿಯಾದ ಸಮಯಕ್ಕೆ ಕಾಯ್ತಾ ಇದ್ದಾರೆ. ಬೈಡನ್‌ ಭೇಟಿ ಸಮಯದಲ್ಲೇ ಈ ಪರೀಕ್ಷೆ ಮಾಡಿದ್ರು ಮಾಡ್ಬಹುದು ಅಂತ ದಕ್ಷಿಣ ಕೊರಿಯಾದ ಸಂಸದ ಹಾ ಟೇ-ಕಿಂಗ್‌ ಹೇಳಿದ್ದಾರೆ. ಇನ್ನ ಅಮೆರಿಕ ಕೂಡ ಇದೇ ರೀತಿ ಮಾತಾಡಿದ್ದು ಬೈಡನ್‌ ಭೇಟಿ ವೇಳೆ ಕಿಮ್‌ ಜಾಂಗ್‌ ಉನ್‌ ಮಿಸೈಲ್‌, ಲಾಂಗ್‌ ರೇಂಜ್‌ ಮಿಸೈಲ್‌ ಅಥವಾ ನ್ಯೂಕ್ಲಿಯರ್‌ ಟೆಸ್ಟ್‌ ಮಾಡಿ ಪ್ರಚೋದನೆ ಮಾಡ್ಬಹುದು ಅಂತ ಹೇಳಿದೆ.

-masthmagaa.com

Contact Us for Advertisement

Leave a Reply