masthmagaa.com:

ಏಷ್ಯಾದ ದೈತ್ಯ ಕಣಜ (Asian Giant Hornet) ಅಥವಾ ಮರ್ಡರ್ ಹಾರ್ನೆಟ್​ನ ಮೊದಲ ಗೂಡನ್ನು ಅಮೆರಿಕದ ಮಿನಸೊಟಾ ರಾಜ್ಯದ ಬ್ಲೈನ್​ ಎಂಬಲ್ಲಿ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಬಗ್ಗೆ ವಾಷಿಂಗ್ಟನ್​ ಕೃಷಿ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಕೀಟಶಾಸ್ತ್ರಜ್ಞರು (Entomologists) ಬ್ಲೈನ್ ಪಟ್ಟಣದ ಮರದ ಪೊಟರೆಯಲ್ಲಿ ದೈತ್ಯ ಕಣಜದ ಗೂಡು ಪತ್ತೆಹಚ್ಚಿದ್ದಾರೆ ಅಂತ ತಿಳಿಸಿದೆ.

ಅಂದ್ಹಾಗೆ ಕೀಟಶಾಸ್ತ್ರಜ್ಞರ ತಂಡವು ಹತ್ತಾರು ಮರ್ಡರ್ ಹಾರ್ನೆಟ್​ಗಳು​ ಗೂಡಿನೊಳಗೆ ಹೋಗೋದನ್ನು ಮತ್ತು ಹೊರಗೆ ಬರೋದನ್ನು ನೋಡಿದ್ದಾರೆ. ‘ಏಷ್ಯನ್ ಜಾಯಿಂಟ್​ ಹಾರ್ನೆಟ್​ಗಳ ಅಮೆರಿಕದ ಸ್ಥಳೀಯ ಕೀಟವಲ್ಲ. ಇವು ಏಷ್ಯಾದ ಅತಿ ದೊಡ್ಡ ಮತ್ತು ಆಕ್ರಮಣಕಾರಿ ಕಣಜಗಳು. ಇವು ಜೇನುಹುಳ ಮತ್ತು ಇತರ ಕೀಟಗಳನ್ನು ಕೊಲ್ಲುತ್ತವೆ. ಇವುಗಳ ಒಂದು ಸಣ್ಣ ಗುಂಪು ಇಡೀ ಜೇನುಗೂಡನ್ನೇ ಕೆಲವೇ ಗಂಟೆಗಳಲ್ಲಿ ಸರ್ವನಾಶ ಮಾಡಬಲ್ಲದು’ ಅಂತ ಪ್ರಕಟಣೆಯಲ್ಲಿ ಹೇಳಲಾಗಿದೆ.

ಎರಡು ಇಂಚಿನ ಈ ಕೀಟಗಳು ಮನುಷ್ಯನಿಗೆ ಕಚ್ಚಿದ್ರೆ ಸಾಯುವ ಅಪಾಯ ಕೂಡ ಇರುತ್ತೆ. ಹೀಗಾಗಿ ಇದನ್ನು ಮರ್ಡರ್ ಹಾರ್ನೆಟ್ ಅಂತ ಕರೆಯಲಾಗುತ್ತೆ. ಅಂದ್ಹಾಗೆ ಅಮೆರಿಕದಲ್ಲಿ 2019ರ ಡಿಸೆಂಬರ್​ನಲ್ಲಿ ಈ ಮರ್ಡರ್​ ಹಾರ್ನೆಟ್​ಗಳು ಮೊದಲ ಬಾರಿ ಕಾಣಿಸಿಕೊಂಡಿದ್ದವು. ಇದೀಗ ಅವುಗಳ ಮೊದಲ ಗೂಡು ಕೂಡ ಪತ್ತೆಯಾಗಿದೆ. ಸಂತಾನೋತ್ಪತ್ತಿ ಮಾಡುವ ಮೊದಲು ಇವುಗಳನ್ನು ನಾಶಪಡಿಸುವ ಅವಶ್ಯಕತೆ ಇದೆ ಅಂತ ಕೃಷಿ ಇಲಾಖೆ ಹೇಳಿದೆ.

-masthmagaa.com

Contact Us for Advertisement

Leave a Reply