ಕ್ವಾಡ್​​​ಗೆ ಸೇರದಂತೆ ಬಾಂಗ್ಲಾಗೆ ಚೀನಾ ಎಚ್ಚರಿಕೆ! ಅಮೆರಿಕ ಹೇಳಿದ್ದೇನು?

masthmagaa.com:

ಕ್ವಾಡ್​​ ಒಕ್ಕೂಟ ಸೇರದಂತೆ ಚೀನಾ ರಾಯಭಾರಿಯ ಎಚ್ಚರಿಕೆಗೆ ಅಮೆರಿಕ ತಿರುಗೇಟು ಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕದ ಸ್ಟೇಟ್​ ಡಿಪಾರ್ಟ್​​ಮೆಂಟ್​​ನ ವಕ್ತಾರ ನೆಡ್​ ಪ್ರೈಸ್​, ನಾವು ಬಾಂಗ್ಲಾದೇಶದ ಜೊತೆಗೆ ಅಮೂಲ್ಯವಾದ ಸಂಬಂಧ ಹೊಂದಿದ್ದೇವೆ. ಬಾಂಗ್ಲಾದೇಶದ ಸಾರ್ವಭೌಮತ್ವವನ್ನು ಗೌರವಿಸೋ ನಾವು, ಅದರ ವಿದೇಶಾಂಗ ನೀತಿಗಳನ್ನು ರೂಪಿಸೋ ಸ್ವಾತಂತ್ರ್ಯವನ್ನು ಕೂಡ ಗೌರವಿಸುತ್ತೇವೆ. ಅದೇ ರೀತಿ ಬಾಂಗ್ಲಾದೇಶದಲ್ಲಿರೋ ಚೀನಾ ರಾಯಭಾರಿ ನೀಡಿರೋ ಹೇಳಿಕೆಯನ್ನು ಕೂಡ ನಾವು ಗಮನಿಸಿದ್ದೇವೆ ಅಂತ ಹೇಳಿದ್ದಾರೆ. ಅಂದಹಾಗೆ ಕ್ವಾಡ್ ಅನ್ನೋದು ಇಂಡೋ ಫೆಸಿಪಿಕ್ ವಲಯದಲ್ಲಿ ಪರಸ್ಪರ ಸಹಕಾರಕ್ಕಾಗಿ ಭಾರತ, ಆಸ್ಟ್ರೇಲಿಯಾ, ಅಮೆರಿಕ ಮತ್ತು ಜಪಾನ್​ ದೇಶಗಳು ರಚಿಸಿಕೊಂಡ ಒಂದು ಒಕ್ಕೂಟ.. ಆದ್ರೆ ಇದು ತನ್ನ ವಿರುದ್ಧ ನಿರ್ಮಾಣವಾಗಿರೋ ಒಕ್ಕೂಟ ಅನ್ನೋದು ಚೀನಾ ಭಾವನೆ. ಹೀಗಾಗಿ ಬಾಂಗ್ಲಾದೇಶ ಈ ಒಕ್ಕೂಟ ಸೇರದಂತೆ ತಡೆಯೋಕೆ ಯತ್ನಿಸ್ತಾ ಇದೆ.

-masthmagaa.com

Contact Us for Advertisement

Leave a Reply