ʻನಾವು ʻNʼಗೆ ಕೈ ಹಾಕ್ತೀವಿ..ʼ ಅಂತಲೇ ಪುಟಿನ್‌ಗೆ ಮತ್ತೆ ಎಚ್ಚರಿಕೆ ಕೊಟ್ಟ ಅಮೆರಿಕ!

masthmagaa.com:

ಯುಕ್ರೇನ್‌ ಯುದ್ದದಲ್ಲಿ ರಷ್ಯಾ ಸೇನೆ ಹಿನ್ನೆಡೆ ಅನುಭವಿಸ್ತಿರೋ ಹೊತ್ತಲ್ಲೇ ಇದೀಗ ಯುಕ್ರೇನ್‌ ಕೈಗೆ ಅಮೆರಿಕದ ಪ್ರಮುಖ ಮತ್ತು ಅತ್ಯಾಧುನಿಕ ಆಯುಧ ಸಿಕ್ಕಿದೆ. NASAMS ಅಥವಾ National Advanced Surface-to-Air Missile System ಹೆಸರಿನ ಏರ್‌ಡಿಫೆನ್ಸ್‌ ಸಿಸ್ಟಂನ್ನ ಅಮೆರಿಕ ನಮಗೆ ಕೊಟ್ಟಿದೆ ಅಂತ ಯುಕ್ರೇನ್‌ ಅಧ್ಯಕ್ಷ ವೊಲಿಡಿಮಿರ್‌ ಝೆಲೆನ್ಸ್ಕಿ ಹೇಳಿದ್ದಾರೆ. ಅಲ್ದೇ ಈ ಸಹಾಯದ ನಿರ್ಧಾರ ಮಾಡಿದ್ದಕ್ಕೆ ಬೈಡೆನ್‌ಗೆ ಧನ್ಯವಾದ…ಆದ್ರೆ ಇದೂ ನಮಗೆ ಸಾಕಾಗೋದಿಲ್ಲ ಅಂತ ಹೇಳಿದ್ದಾರೆ.ಇದೇ ವೇಳೆ ರಷ್ಯಾ, ಸೇನೆಯನ್ನ ಸಜ್ಜುಗೊಳಿಸೋಕೆ ಆದೇಶ ಕೊಟ್ಟಿರೋದು ಅದು ಅವರ ವೀಕ್‌ನೆಸ್‌ನ್ನ ತೋರಿಸುತ್ತೆ ಅಂತ ಪುಟಿನ್‌ರನ್ನ ಮತ್ತೆ ಕುಟುಕಿದ್ದಾರೆ. ಅಲ್ದೇ ಇಂತಹ ನಿರ್ಧಾರಗಳು ಅವರು ಫೈಟ್‌ ಮಾಡೋಕೆ ಅರ್ಹರಲ್ಲ ಅನ್ನೋದನ್ನ ತಿಳಿಸುತ್ತೆ. ಅವರು ನಮ್ಮ ವಿದ್ಯುತ್‌ ಸ್ಥಾವರಗಳನ್ನ ಟಾರ್ಗೆಟ್‌ ಮಾಡ್ಬೋದು. ಅವರುನಮ್ಮ ಮೇಲೆ ಮಿಸೈಲ್‌ ಹಾಕ್ಬೋದು. ಹೌದು ಇದೆಲ್ಲಾ ಒಂದು ಚಾಲೆಂಜ್‌, ಆದ್ರೆ ನಾವು ಇದಕ್ಕೆಲ್ಲಾ ಹೆದರೋದಿಲ್ಲ ಅಂತ ಹೇಳಿದ್ದಾರೆ. ಇತ್ತ ಈ ಮಿಲಿಟರಿ ಮೊಬಿಲೈಜೇಷನ್‌ ಅಥವಾ ಸೇನಾ ಸಜ್ಜುಗೊಳಿಸುವಿಕೆಗೆ ಪುಟಿನ್‌ರ ಕೆಲ ಆಪ್ತರು, ಅಲ್ಲಿನ ಜನಸಮುದಾಯವರು ಭಾರಿ ಮಟ್ಟದಲ್ಲಿ ಆಕ್ರೋಶ, ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ. ರಷ್ಯಾದ ಮೇಲ್ಮನೆಯ ಸದಸ್ಯೆ ವ್ಯಾಲೆಂಟಿನಾ ಮ್ಯಾಟ್ವಿಯೆಂಕೋ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಕೆಲವು ಅತಿರೇಕಗಳನ್ನ ಒಪ್ಪಿಕೊಳ್ಳೋಕಾಗಲ್ಲ. ಅದು ಜನಸಾಮಾನ್ಯರ ಮೇಲೆ ಖಂಡಿತಾ ವ್ಯತಿರಿಕ್ತ ಪರಿಣಾಮ ಬೀರುತ್ತೆ..ಒಂದು ಸಿಂಗಲ್‌ ಮಿಸ್ಟೇಕ್‌ ಆದ್ರೂ ಕೂಡ ಜವಾಬ್ದಾರಿಯಾಗ್ಬೇಕಾಗುತ್ತೆ ಅಂತ ಹೇಳಿದ್ದಾರೆ. ಇನ್ನು ಕಳೆದ ವಾರವಷ್ಟೇ ರಷ್ಯಾ ನ್ಯೂಕ್ಲಿಯರ್‌ ಬಳಸಿದ್ರೆ ನಾವು ಬಳಸ್ತೀವೋ ಇಲ್ವೋ ಅದನ್ನ ನಾವು ಈಗಲೇ ಹೇಳೋಲ್ಲ. ಅದೆಲ್ಲಾ ರಷ್ಯಾದವರು ತಗಳ್ಳೋ ನಿರ್ಧಾರದ ಮೇಲೆನೇ ನಿಂತಿದೆ ಅಂತ ಅಮೆರಿಕ ಅಧ್ಯಕ್ಷ ಬೈಡೆನ್ ಹೇಳಿದ್ರು. ಆದ್ರೆ ಈಗ ಸ್ವತಃ ಅಮೆರಿಕದ ಭದ್ರತಾ ಸಲಹೆಗಾರ ಜೆಕ್‌ ಸಲ್ಲೀವನ್‌ ರಷ್ಯಾಗೆ ಬಿಗ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ರಷ್ಯಾ ಒಂದ್ವೇಳೆ ಲೈನ್‌ ಕ್ರಾಸ್‌ ಮಾಡಿದ್ರೆ, ಅಂದ್ರೆ ನ್ಯೂಕ್ಲಿಯರ್‌ಗೆ ಕೈ ಹಾಕಿ, ಮಹಾದುರಂತದ ಯೋಚನೆಗಳನ್ನ ಮಾಡಿದ್ರೆ ಖಂಡಿತಾ ಇದಕ್ಕೆ ಅಮೆರಿಕ ನಿರ್ಣಾಯಕ ಕ್ರಮ ತೆಗೆದುಕೊಳ್ಳುತ್ತೆ ಅಂತ ಹೇಳಿದ್ದಾರೆ. ಆ ಮೂಲಕ ನೀವು ಏನಾದ್ರೂ ಅಣ್ವಸ್ತ್ರದ ಯೋಚನೆ ಮಾಡಿದ್ರೆ ನಾವೂ ಕೂಡ N ಬಟನ್‌ ಒತ್ತೋದು ಶತಸಿದ್ದ ಅನ್ನೋ ವಾರ್ನಿಂಗನ್ನ ಪುಟಿನ್‌ಗೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply