ಇಡೀ ರಾಜ್ಯವೇ ಜೈಲು, ಮಸೀದಿ, ಸ್ಮಶಾನ ನಾಶ! ಚೀನಾದಲ್ಲಿ ಮುಸ್ಲಿಂ ದಮನ?

masthmagaa.com:

ಚೀನಾದ ಶಿನ್‌ಜಿಯಾಂಗ್‌ ಪ್ರದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಉಯಿಗೋರ್‌ ಮುಸ್ಲಿಂರ ಮೇಲೆ ಚೀನಾ ಸರ್ಕಾರ ದಬ್ಬಾಳಿಕೆ ಮಾಡೋದು ಎಲ್ಲರಿಗೂ ಗೊತ್ತಿದೆ. ಇದೀಗ ಶಿನ್‌ಜಿಯಾಂಗ್‌ನಲ್ಲಿರೊ ಉಯಿಗೋರ್‌ ಕ್ಯಾಂಪ್‌ಗಳನ್ನ ಅಧಿಕೃತವಾಗಿ ಜೈಲುಗಳಾಗಿ ಕನ್ವರ್ಟ್‌ ಮಾಡಲಾಗಿದೆ. ಜೊತೆಗೆ ಅರೆಸ್ಟ್‌ ಆದವರಿಗೆ ದೀರ್ಘಾವಧಿಯ ಜೈಲು ಶಿಕ್ಷೆಯನ್ನ ನೀಡಲಾಗ್ತಿದೆ ಅಂತ ಅಮೆರಿಕ ಮೂಲದ ʻಫಾರಿನ್‌ ಅಫೇರ್ಸ್‌ʼ ಅನ್ನೊ ಮಾಗಜೀನ್‌ನಲ್ಲಿ ವರದಿ ಮಾಡಲಾಗಿದೆ. ಈ ಬಂಧಿತರನ್ನ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡೋಕೆ ಅಥ್ವಾ ಬೇರೆಡೆಗೆ ಸ್ಥಳಾಂತರ ಮಾಡಲಾಗ್ತಿದೆ. ಅವ್ರಿಗೆ ಉಯಿಗೋರ್‌ ಭಾಷೆಯನ್ನ ಬಳಸದಂತೆ, ಇಸ್ಲಾಂ ಅನ್ನ ಅನುಸರಿಸದಂತೆ ನಿರ್ಬಂಧ ಹೇರಲಾಗಿದೆ. ಮಸೀದಿಗಳನ್ನ, ಅವರ ಸ್ಮಶಾನಗಳನ್ನ ನಾಶಗೊಳಿಸಲಾಗಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಶಿನ್‌ಜಿಯಾಂಗ್‌ ಪ್ರದೇಶದ ಪಾಸ್‌ಪೋರ್ಟ್‌ ನೀತಿಯಲ್ಲಿ ಅಲ್ಲಿನ ಜನರು ಗಡಿಯನ್ನ ದಾಟದಂತೆ ತಡೆಯಲಾಗಿದೆ ಅಂತ ಉಯಿಗೋರ್‌ ಸಮುದಾಯದ ಜಾಮಲ್‌ ಅನ್ನೊ ವ್ಯಕ್ತಿ ಅಮೆರಿಕದಲ್ಲಿ ಸಂದರ್ಶನವೊಂದ್ರಲ್ಲಿ ಹೇಳಿದ್ದಾರೆ. ಜೊತೆಗೆ ಉಯಿಗೋರ್‌ ವ್ಯಕ್ತಿ ವ್ಯಾಲಿಡ್‌ ಆಗಿರೊ ಚೀನಾ ಪಾಸ್‌ಪೋರ್ಟ್‌ ಮತ್ತು ವೀಸಾವನ್ನ ಹೊಂದಿದ್ರೂ ಸಹ, ವಿದೇಶಕ್ಕೆ ಹೋಗಬೇಕಂದ್ರೆ ಅಲ್ಲಿನ ಸರ್ಕಾರದ ಒಪ್ಪಿಗೆ ದಾಖಲೆಯನ್ನ ಹೊಂದಿರಬೇಕು. ಇಲ್ಲದಿದ್ರೆ ಉಯಿಗೋರ್‌ ವ್ಯಕ್ತಿಗಳು ಗಡಿ ದಾಟೋಕೆ ಆಗಲ್ಲ ಅಂತ ಜಮಾಲ್‌ ಹೇಳಿದ್ದಾರೆ. ಇನ್ನೊಂದ್‌ ಕಡೆ ಚೀನಾ ಸಂಸ್ಕೃತಿಯಲ್ಲಿ ಮುಸ್ಲಿಂರನ್ನ ಅಥ್ವಾ ಇಸ್ಲಾಂನ್ನ ಟಾರ್ಗೆಟ್‌ ಮಾಡೋ ಕಾನ್ಸೆಪ್ಟ್‌ ಇಲ್ಲ. ಚೀನಾದ ಸಮೃದ್ಧಿ ಮತ್ತು ಅಭಿವೃದ್ದಿಯನ್ನ ಜಗತ್ತಿಗೆ ಹೇಳೋದು ಅವರ ಜವಾಬ್ದಾರಿ ಅಂತ ಶಿನ್‌ಜಿಯಾಂಗ್‌ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಇಸ್ಲಾಮಿಕ್‌ನ ಹಿರಿಯ ಮುಖಂಡ ಅಲಿ ರಶೀದ್‌ ಅಲ್ ನುಯಾಮಿ‌ ಹೇಳಿದ್ರು. ಇವರ ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗ್ತಿದೆ. ಜಗತ್ತಾನಾದ್ಯಂತ ಇರೊ ಉಯಿಗೋರ್‌ ಸಮುದಾದವ್ರು ಈ ಹೇಳಿಕೆಯನ್ನ ಖಂಡಿಸ್ತಿದಾರೆ.

-masthmagaa.com

Contact Us for Advertisement

Leave a Reply